ಕ್ರಿಕೆಟ್

ಔಪಚಾರಿಕ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಗೆದ್ದ ಲಂಕಾ ಮಹಿಳೆಯರು

Srinivasamurthy VN

ಬೆಂಗಳೂರು: ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೊನೆಯ ಔಪಚಾರಿಕ ಪಂದ್ಯದಲ್ಲಿ ಶ್ರೀಲಂಕಾ ಮಹಿಳೆಯರ ತಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 10 ರನ್ ಗಳ ಜಯ ಸಾಧಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಮಹಿಳೆಯರ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 114 ರನ್ ಪೇರಿಸಿತು. ಲಂಕಾ ಪರ  ಎಸಿ ಜಯಂಗಿಣಿ ಅವರ ಆಕರ್ಷಕ ಅರ್ಧಶತಕದ ಹೊರತಾಗಿಯೂ ಬ್ಯಾಟಿಂಗ್ ವೈಫಲ್ಯ ಕಂಡ ಲಂಕಾ ತಂಡ 114ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ದಕ್ಷಿಣ ಆಫ್ರಿಕಾ ಪರ ಉತ್ತಮ  ಬೌಲಿಂಗ್ ಮಾಡಿದ ಲ್ಯೂಸ್ ಮತ್ತು ಕೆಪ್ ತಲಾ 2 ವಿಕೆಟ್ ಪಡೆದರೆ, ಇಸ್ಮಾಯಿಲ್ ಮತ್ತು ಲೆಟ್ ಸೋಲೋ ತಲಾ 1 ವಿಕೆಟ್ ಪಡದೆರು.

ಶ್ರೀಲಂಕಾ ನೀಡಿದ 115 ರನ್ ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ ವನಿತೆಯರು ಉತ್ತಮ ಆರಂಭ ಕಂಡರೂ ಬಳಿಕ ಲಂಕಾದ ಪ್ರಭಾವಿ ಬೌಲಿಂಗ್ ದಾಳಿಯಿಂದಾಗಿ  ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 104 ರನ್ ಗಳನ್ನಷ್ಟೇ ಗಳಿಸಲು ಶಕ್ತರಾದರು. ಆ ಮೂಲಕ ಲಂಕಾ ವಿರುದ್ಧ 10 ರನ್ ಗಳ ರೋಚಕ ಸೋಲು ಕಂಡರು. ಲಂಕಾಪರ ಕುಮಾರಿ  ಮತ್ತು ಪ್ರಬೋದಿನಿ ತಲಾ 2 ವಿಕೆಟ್ ಗಳಿಸಿದರೆ, ಜಯಂಗಿಣಿ ಮತ್ತು ಕೌಶಲ್ಯ ತಲಾ ವಿಕೆಟ್ ಪಡೆದರು.

ಬ್ಯಾಟಿಂಗ್ ವೇಳೆ ಆಕರ್ಷಕ ಅರ್ಧಶತಕ ಮತ್ತು 1 ವಿಕೆಟ್ ಪಡೆದ ಜಯಂಗಿಣ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

SCROLL FOR NEXT