ಐಪಿಎಲ್ ನ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲಿನೊಂದಿಗೆ ಎದೆ ಗುಂದಿದ್ದ ಡೆಲ್ಲಿ ಡೇರ್ ಡೇವಿಲ್ಸ್ ತಂಡ ನಂತರ ಫೀನಿಕ್ಸ್ ನಂತೆ ಎದ್ದು ಬಂದಿದೆ.
ಐಪಿಎಲ್ ನಲ್ಲಿ ಕಳೆದ ಪ್ರದರ್ಶನ ನೀಡುತ್ತಿದ್ದ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ನಾನು ಕಾರಣನಲ್ಲ. ಇಂತಹ ಮಹಾತ್ ಬದಲಾವಣೆಗೆ ತಂಡದ ಮುಖ್ಯ ಸಲಹೆಗಾರ ರಾಹುಲ್ ದ್ರಾವಿಡ್ ಅವರ ತಂತ್ರ ಮತ್ತು ನೈಪುಣ್ಯತೆಯೇ ಕಾರಣ ಎಂದು ಡೆಲ್ಲಿ ಡೇರ್ ಡೇವಿಲ್ಸ್ ತಂಡದ ನಾಯಕ ಜಹೀರ್ ಖಾನ್ ಹೇಳಿದ್ದಾರೆ.
ನಾನೇನು ಸೂಪರ್ ಕ್ಯಾಪ್ಟನ್ ಅಲ್ಲ. ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ಆಡುತ್ತಿದ್ದಾಗ ಯಾವ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದೇನೋ ಅದನ್ನೇ ಮುಂದುವರೆಸಿದ್ದೇನೆ ಅಷ್ಟೇ ಎಂದು ಜಹೀರ್ ಹೇಳಿದ್ದಾರೆ.
ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಮುಖ್ಯ ಸಲಹೆಗಾರನಾಗಿರುವ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಅವರು ತಮ್ಮ ಅನುಭವವನ್ನು ಮಾತುಗಳನ್ನು ಆಡುವ ಮೂಲಕ ಪ್ರತಿಯೊಬ್ಬ ಆಟಗಾರನಿಗೂ ಉತ್ಸಾಹ ತುಂಬುತ್ತಿದ್ದಾರೆ. ಇದರಿಂದಾಗಿ ಐಪಿಎಲ್ ನಲ್ಲಿ ಪ್ರತಿ ಪಂದ್ಯದಲ್ಲೂ ಡೆಲ್ಲಿ ತಂಡ ಗೆಲ್ಲಲು ಪ್ರೇರಣೆಯಾಗಿದೆ ಎಂದರು.
ಇನ್ನ ಸತತ ಗೆಲುವಿನೊಂದಿಗೆ ಡೆಲ್ಲಿ ಡೇರ್ ಡೇವಿಲ್ಸ್ ತಂಡ ಐಪಿಎಲ್ ನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು ಆಡಿರುವ 8 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಗೆಲವು ಸಾಧಿಸಿ 10 ಅಂಕಗಳನ್ನು ಪಡೆದುಕೊಂಡಿದೆ.