ಇಂಡಿಯನ್ ಪ್ರಿಮಿಯರ್ ಲೀಗ್ 9ನೇ ಆವೃತ್ತಿಯ ಎಂಎಸ್ ಧೋನಿ ನಾಯಕತ್ವದ ನೂತನ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಫ್ಲೇ ಆಫ್ ಕನಸು ನುಚ್ಚುನೂರಾಗಿದೆ.
ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪುಣೆ ತಂಡ 4 ರನ್ ಗಳಿಂದ ಸೋಲು ಕಂಡಿದ್ದು, ಪುಣೆಗೆ ಮುಂದಿನ ಪಂದ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಪುಣೆಯ ಪ್ರಮುಖ ಮೂರು ವಿಕೆಟ್ ಪಡೆದ ಆಶಿಶ್ ನೆಹ್ರಾ ಶಾಕ್ ನೀಡಿದರು. ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದ ಪುಣೆ ತಂಡ 133 ರನ್ ಗಳಿಸಷ್ಟೇ ಶಕ್ಯವಾಯಿತು. ಇದರೊಂದಿಗೆ ಪುಣೆ ಹೈದರಾಬಾದ್ ಗೆ 4 ರನ್ ಗಳಿಂದ ಸೋಲನ್ನಪ್ಪಿತು.
ಪುಣೆ ಪರ ಅಜಿಂಕ್ಯ ರಹಾನೆ 0, ಕ್ವಾಜಾ 11, ಜಾರ್ಜ್ ಬೆಲ್ಲಿ 34, ಆರ್ ಅಶ್ವಿನ್ 34, ತಿವಾರಿ 9, ಎಂಎಸ್ ಧೋನಿ 30, ಪೆರೇರಾ 17 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಆಶಿಶ್ ನೆಹ್ರಾ 3, ಭುವನೇಶ್ವರ್, ಸ್ರಾನ್ ಹಾಗೂ ಹೆನ್ರಿಕ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ.
ಹೈದರಾಬಾದ್ ಪರ ಡೇವಿಡ್ ವಾರ್ನರ್ 11, ಶಿಖರ್ ಧವನ್ 33, ವಿಲಿಯಮ್ಸನ್ 32, ಯುವರಾಜ್ ಸಿಂಗ್ 23, ಹೆನ್ರಿಕ್ಸ್ 10, ಹೂಡಾ 14 ರನ್ ಗಳಿಸಿದ್ದಾರೆ.
ಪುಣೆ ಪರ ಝಂಪಾ 6, ಯುವರಾಜ್ ಸಿಂಗ್ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಪುಣೆ ಪರ 6 ವಿಕೆಟ್ ಪಡೆದ ಝಂಪಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.