ಉತ್ತಮ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮಸನ್ (ಕ್ರಿಕ್ ಇನ್ಫೋ ಚಿತ್ರ) 
ಕ್ರಿಕೆಟ್

ಸನ್ ರೈಸರ್ಸ್ ಗೆ ಶಾಕ್ ನೀಡಿದ ಡೇರ್ ಡೆವಿಲ್ಸ್

ಸನ್ ರೈಸರ್ಸ್ ಹೈದರಾಬಾದ್ ತಂಡದ ನೀರಸ ಬ್ಯಾಟಿಂಗ್ ನಿಂದಾಗಿ ಗುರುವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡದ ನೀರಸ ಬ್ಯಾಟಿಂಗ್ ನಿಂದಾಗಿ ಗುರುವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ ಹೈದರಾಬಾದ್ ತಂಡವನ್ನು  ಕೇವಲ 146 ರನ್ ಗಳಿಗೆ ನಿಯಂತ್ರಿಸಿತು. ಹೈದರಾಬಾದ್ ನ ಬ್ಯಾಟಿಂಗ್ ಪಿಚ್ ನಲ್ಲಿ ರನ್ ಗಳಿಸಲು ತಿಣುಕಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು  ಕೇವಲ 146 ರನ್ ಗಳನ್ನಷ್ಟೇ ಗಳಿಸಿದರು.

ಆರಂಭದಲ್ಲಿ ಹೈದರಾಬಾದ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಡೇವಿಜ್ ವಾರ್ನರ್ ಮತ್ತು ಶಿಖರ್ ಧವನ್ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಈ ಪೈಕಿ  ಧವನ್ 34 ರನ್ ಗಳಿಸಿ ಔಟ್ ಆದರೆ, ವಾರ್ನರ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿಲಿಯಮ್ಸನ್ ಕೂಡ 27 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರು.  ಆದರೆ ವಿಲಿಯಮ್ಸನ್ ಗೆ ಹೈದರಾಬಾದ್ ತಂಡದ ಬೇರಾವ ಆಟಗಾರರನೂ ಉತ್ತಮ ಸಾಥ್ ನೀಡಲಿಲ್ಲ. ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಸೇರಿದಂತೆ ಮಧ್ಯಮ ಕ್ರಮಾಂಕ  ಸಂಪೂರ್ಣ ವಿಫಲರಾಗುವುದರೊಂದಿಗೆ ಹೈದರಾಬಾದ್ ತಂಡ 8 ವಿಕೆಟ್ ಕಳೆದುಕೊಂಡು 146 ರನ್ ಗಳನ್ನಷ್ಟೇ ಗಳಿಸಲಷ್ಟೇ ಶಕ್ತವಾಯಿತು.

ದೆಹಲಿ ಪರ ಕಲ್ಟರ್ ನೈಲ್ ಮತ್ತು ಮಿಶ್ರಾ 2 ವಿಕೆಟ್ ಪಡೆದರೆ, ಯಾದವ್, ಶಮಿ ಮತ್ತು ಮೋರಿಸ್ ತಲಾ 1 ವಿಕೆಟ್ ಪಡೆದರು.

ಹೈದರಾಬಾದ್ ನೀಡಿದ 146 ರನ್ ಗಳ ಗುರಿಯನ್ನು ಬೆನ್ನುಹತ್ತಿದ ದೆಹಲಿಗೆ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಆರಂಭಿಕ ಆಟಗಾರ ಅಗರ್ವಾಲ್ 10 ರನ್ ಗಳಿಸಿ ಔಟ್ ಆದರೂ ಕೂಡ  ದೃತಿಗೆಡೆದ ಟಿಕಾಕ್ 31 ಎಸೆತಗಳಲ್ಲಿ 44 ರನ್ ಸಿಡಿಸಿದರು. ಬಳಿಕ ಬಂದ ನಾಯರ್ 20 ರನ್ ಗಳಿಸಿ ಔಟ್ ಆದರೆ, ಡಿಕಾಕ್ ಹೆನ್ರಿಕ್ಸ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಗೂಡಿದ ಸ್ಯಾಮಸನ್  (ಅಜೇಯ 34 ರನ್)ಮತ್ತು ಪ್ಯಾಂಟ್ (ಅಜೇಯ 39 ರನ್)ಜೋಡಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ದೆಹಲಿಗೆ 7 ವಿಕೆಟ್ ಗಳ ಭರ್ಜರಿ ಗೆಲುವು ತಂದುಕೊಟ್ಟರು.

ಹೈದರಾಬಾದ್ ಪರ ಹೆನ್ರಿಕ್ಸ್ 2 ವಿಕೆಟ್ ಪಡೆದರೆ, ನೆಹ್ರಾ 1 ವಿಕೆಟ್ ಪಡೆದರು. 4 ಓವರ್ ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಪಡೆದ ದೆಹಲಿ ತಂಡದ ಕ್ರಿಸ್ ಮೋರಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ  ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ಬೆನ್ನೆಲುಬು ಮುರಿಯಲು ಅಮೆರಿಕಾ ಪ್ಲ್ಯಾನ್: 'Economic D-Day' ಘೋಷಣೆ; ನೆರವು ನೀಡುವ ರಾಷ್ಟ್ರಗಳಿಗೂ ಕಾದಿದೆ ಗಂಡಾಂತರ..!

ಲೋಕಸಭೆ ಸದಸ್ಯ ಬಲ 25 ವರ್ಷ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಕಾಂಗ್ರೆಸ್ ಒತ್ತಾಯ; 2029ರಿಂದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಆಗ್ರಹ

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ