ಸುರೇಶ್ ರೈನಾ - ಪ್ರಿಯಾಂಕಾ ದಂಪತಿ (ಕೃಪೆ: ಟ್ವಿಟರ್) 
ಕ್ರಿಕೆಟ್

ಹೆಣ್ಣು ಮಗುವಿನ ಅಪ್ಪನಾದ ಸುರೇಶ್ ರೈನಾ

ಕ್ರಿಕೆಟಿಗ ಸುರೇಶ್ ರೈನಾ -ಪ್ರಿಯಾಂಕಾ ದಂಪತಿಗಳಿಗೆ ಶನಿವಾರ ಹೆಣ್ಣು ಮಗು ಜನಿಸಿದೆ. ಐಪಿಎಲ್ ಪಂದ್ಯಗಳಲ್ಲಿ ಗುಜರಾತ್ ...

ನೆದರ್‌ಲ್ಯಾಂಡ್ಸ್ : ಕ್ರಿಕೆಟಿಗ ಸುರೇಶ್ ರೈನಾ -ಪ್ರಿಯಾಂಕಾ ದಂಪತಿಗಳಿಗೆ ಶನಿವಾರ ಹೆಣ್ಣು ಮಗು ಜನಿಸಿದೆ. ಐಪಿಎಲ್ ಪಂದ್ಯಗಳಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕನಾಗಿರುವ ರೈನಾ ಇದೀಗ ತನ್ನ ಕುಟುಂಬದವರೊಂದಿಗೆ ನೆದರ್‌ಲ್ಯಾಂಡ್ಸ್‌ನಲ್ಲಿದ್ದಾರೆ.
ಸೋಷ್ಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರೈನಾ, ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದೇನೆ ಎಂದು ಪತ್ನಿಯೊಂದಿಗಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 
ಕೆಲವೊಂದು ಮೂಲಗಳ ಪ್ರಕಾರ ರೈನಾ ತಮ್ಮ ಮೊದಲ ಮಗುವಿಗೆ ಶ್ರೇಯಾಂಶಿ ರೈನಾ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ರೈನಾ ಪ್ರಿಯಾಂಕಾ ಚೌಧರಿಯನ್ನು ಮದುವೆಯಾಗಿದ್ದರು.
ಪತ್ನಿಯ ಹೆರಿಗೆ ನಿಮಿತ್ತ ಐಪಿಎಲ್ ಪಂದ್ಯದಿಂದ ಹೊರಗುಳಿದಿರುವ ರೈನಾ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಗುಜರಾತ್ ಲಯನ್ಸ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಅದೇ ವೇಳೆ ಗುರುವಾರ ಕಾನ್ಪುರದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಇವರು ಅಲಭ್ಯವಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!