ಕೋಲ್ಕತ್ತಾ: ಐಪಿಎಲ್ 9ನೇ ಆವೃತ್ತಿಯ 45ನೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳಿಂದ ಮಣಿಸಿದೆ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪುಣೆ 17.4 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ಈ ವೇಳೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಎರಡು ಗಂಟೆಗಳ ನಂತರ ಪಂದ್ಯ ಆರಂಭಗೊಂಡು ಡಿಎಲ್ಎಫ್ ನಿಯಮದನ್ವಯ 9 ಓವರ್ ಗಳಲ್ಲಿ 66 ರನ್ ಗುರಿ ನೀಡಲಾಯಿತು.
ಬಿರುಸಿನ ಬ್ಯಾಟಿಂಗ್ ನಡೆಸಿದ ಯೂಸೂಫ್ ಪಠಾಣ್ 18 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಕೆಕೆಆರ್ ಪರ ಉತ್ತಪ್ಪ 4, ಗಂಭೀರ್ 0, ಮನೀಷ್ ಪಾಂಡೆ ಅಜೇಯ 15 ಹಾಗೂ ಯೂಸುಫ್ ಪಠಾಣ್ 37 ರನ್ ಸಿಡಿಸಿದ್ದಾರೆ.
ಪುಣೆ ಪರ ಆರ್ ಅಶ್ವಿನ್ 2 ವಿಕೆಟ್ ಪಡೆದಿದ್ದಾರೆ.
ಪುಣೆ ಪರ ರಹಾನೆ 2, ಖವಾಜ 21, ಬೈಲಿ 33, ಸೌರಭ್ ತಿವಾರಿ 13, ಇರ್ಫಾನ್ 7, ಥಿಸ್ಸರ ಪೆರೇರಾ 13, ಧೋನಿ ಅಜೇಯ 8 ರನ್ ಗಳಿಸಿದ್ದಾರೆ.
ಕೆಕೆಆರ್ ಪರ ಪೀಯುಷ್ ಚಾವ್ಲಾ 2, ರಸೆಲ್ ಹಾಗೂ ಹಸನ್ 1 ವಿಕೆಟ್ ಪಡೆದಿದ್ದಾರೆ.