ವಿರಾಟ್ ಕೊಹ್ಲಿ 
ಕ್ರಿಕೆಟ್

ಹಸ್ತದಲ್ಲಿನ ಗಾಯಕ್ಕೆ 8 ಹೊಲಿಗೆ ಹಾಕಿದ್ದರೂ ನೋವ ಲೆಕ್ಕಿಸದೆ ಕೊಹ್ಲಿ ಸಿಡಿಸಿದ್ದು 8 ಸಿಕ್ಸರ್!

ಆ ಭರ್ಜರಿ ಬ್ಯಾಟಿಂಗ್ ಮಾಡುವ ಹೊತ್ತಿಗೆ ಕೊಹ್ಲಿ ಹಸ್ತಕ್ಕೆ ಗಾಯವಾಗಿ 8 ಹೊಲಿಗೆ ಹಾಕಲಾಗಿತ್ತು. ಅಷ್ಟೊಂದು ಹೊಲಿಗೆ ಹಾಕಿದ್ದ ನೋವನ್ನು ಲೆಕ್ಕಿಸದೆ...

ಬೆಂಗಳೂರು: ಮೇ 18ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕದ ಮೂಲಕ ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡವನ್ನು ಗೆಲ್ಲಿಸಿದ್ದು ನೋಡಿದ್ದೇವೆ.  
ಪ್ರಸ್ತುತ ಪಂದ್ಯದಲ್ಲಿ ಕೊಹ್ಲಿ 50 ಬಾಲ್‌ಗಳಲ್ಲಿ 113 ರನ್ ಗಳಿಸಿ  ದಾಖಲೆ ಸೃಷ್ಟಿಸಿದ್ದರು. ಐಪಿಎಲ್ ಪಂದ್ಯದಲ್ಲಿ ಕೊಹ್ಲಿಯ ನಾಲ್ಕನೇ ಶತಕವಾಗಿತ್ತು ಇದು. 
ಆದರೆ ಆ ಭರ್ಜರಿ ಬ್ಯಾಟಿಂಗ್ ಮಾಡುವ ಹೊತ್ತಿಗೆ ಕೊಹ್ಲಿಯ ಎಡ ಹಸ್ತಕ್ಕೆ ಗಾಯವಾಗಿ 8 ಹೊಲಿಗೆ ಹಾಕಲಾಗಿತ್ತು. ಅಷ್ಟೊಂದು ಹೊಲಿಗೆ ಹಾಕಿದ್ದ ನೋವನ್ನು ಲೆಕ್ಕಿಸದೆ ಕೊಹ್ಲಿ ಬ್ಯಾಟಿಂಗ್ ಮಾಡಿದ್ದರು. ಪಂದ್ಯ ಮುಗಿದ ನಂತರ ಮಾತನಾಡಿದ ಕೊಹ್ಲಿ, ಪಂದ್ಯವನ್ನು ಗೆಲ್ಲಿಸುವ ಹೋರಾಟದಲ್ಲಿ ಈ ನೋವು ಯಾವುದೂ ಲೆಕ್ಕಕಿಲ್ಲ, ಕೈಯಲ್ಲಿ 10 ಹೊಲಿಗೆ ಹಾಕಿದ್ದರೂ ನಾನು ಅದನ್ನು ಕ್ಯಾರೇ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. 
50 ಬಾಲ್‌ಗಳಲ್ಲಿ  12 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿ ಕೊಹ್ಲಿ 113 ರನ್ ದಾಖಲಿಸಿದ್ದರು. ಪಂದ್ಯದುದ್ದಕ್ಕೂ ರನ್ ಮೆಶೀನ್‌ನಂತೆ ಆಟವಾಡಿದ ಕೊಹ್ಲಿಯ ಅಭೂತಪೂರ್ವ ಪ್ರದರ್ಶನಕ್ಕೆ ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.
ಕೈಯಲ್ಲಿ 8 ಹೊಲಿಗೆ ಇದ್ದರೂ ಎಂಟು ಸಿಕ್ಸರ್ ಬಾರಿಸಿದ್ದಾರೆ ಕೊಹ್ಲಿ ಎಂಬ ಟ್ವೀಟ್ ನಿಂದ ಹಿಡಿದು, ಕೊಹ್ಲಿ ಅನ್ಯ ಗ್ರಹದಿಂದ ಬಂದವರು ಎನ್ನುವ ತರಹೇವಾರಿ ಟ್ವೀಟ್‌ಗಳಿಂದ  ನೆಟಿಜನ್‌ಗಳು ಸೋಷ್ಯಲ್ ಮೀಡಿಯಾದಲ್ಲಿ ಕೊಹ್ಲಿಗೆ ಜೈಕಾರ ಕೂಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?