ಕ್ರಿಸ್ ಗೇಲ್ - ಶಾರ್ಲೆಟ್ ಎಡ್ವಾರ್ಡೆಸ್ 
ಕ್ರಿಕೆಟ್

ಪತ್ರಕರ್ತೆಯಲ್ಲಿ ಅಶ್ಲೀಲ ಪ್ರಶ್ನೆಗಳನ್ನು ಕೇಳಿ ಫ್ಲರ್ಟ್ ಮಾಡಿದ ಕ್ರಿಸ್ ಗೇಲ್

ತನಗೆ ಸೆಕ್ಸ್ ಬಗ್ಗೆ ಇರುವ ನಿಲುವನ್ನು ಮುಕ್ತವಾಗಿ ಹೇಳಿದ ಗೇಲ್, ನಿಮ್ಮ ಕತೆ ಹೇಗೆ? ಎಂದು ಪತ್ರಕರ್ತೆಯಲ್ಲಿ ಕೇಳಿದ್ದಾರೆ...

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನರ್ ಕ್ರಿಸ್ ಗೇಲ್ ಮತ್ತೊಮ್ಮೆ ವಿವಾದಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಹಿಂದೆ ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ ಮಾಡಿ ಗೇಲ್ ವಿವಾದಕ್ಕೀಡಾಗಿದ್ದು ಮಾತ್ರವಲ್ಲದೆ ಬಹು ಮೊತ್ತದ ದಂಡ ತೆರಬೇಕಾಗಿ ಬಂದಿತ್ತು.
ಇದೀಗ ಬೆಂಗಳೂರಿನಲ್ಲಿ ಟೈಮ್ಸ್ ಮ್ಯಾಗಜಿನ್‌ನ ಶಾರ್ಲೆಟ್ ಎಡ್ವಾರ್ಡೆಸ್ ಎಂಬ ಪತ್ರಕರ್ತೆಗೆ ಸಂದರ್ಶನ ನೀಡುವ ವೇಳೆ ಸೆಕ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳಿ ಗೇಲ್ ಮುಜುಗರಕ್ಕೀಡಾಗುವಂತೆ ಮಾಡಿದ್ದಾರೆ. 
ತನಗೆ ಸೆಕ್ಸ್ ಬಗ್ಗೆ ಇರುವ ನಿಲುವನ್ನು ಮುಕ್ತವಾಗಿ ಹೇಳಿದ ಗೇಲ್, ನಿಮ್ಮ ಕತೆ ಹೇಗೆ? ಎಂದು ಪತ್ರಕರ್ತೆಯಲ್ಲಿ ಕೇಳಿದ್ದಾರೆ.
ಸಂದರ್ಶನದಲ್ಲಿ ಮಹಿಳೆಯರ ಸಮಾನತೆ ಬಗ್ಗೆ ಮಾತನಾಡಿದ ಗೇಲ್, ಮಹಿಳೆಯರಿಗೆ ಯಾವುದು ಇಷ್ಟವೋ ಅವರು ಅದನ್ನು ಮಾಡಬಹುದು. ಜಮೈಕಾದ ಮಹಿಳೆಯರು ಮುಕ್ತವಾಗಿ ಎಲ್ಲವನ್ನೂ ಹೇಳುತ್ತಾರೆ ಎಂದು ಹೇಳಿದ ಗೇಲ್ ಮಹಿಳೆಯರು ಪುರುಷರನ್ನು ಓಲೈಸಿಕೊಳ್ಳಬೇಕು, ಅದು ಹೇಗೆ? ಎಂಬುದನ್ನೂ ವಿವರಿಸಿದ್ದಾರೆ.
ಓರ್ವ ಮಹಿಳೆಯಲ್ಲಿ ಕೇಳಬಾರದ ಪ್ರಶ್ನೆಗಳನ್ನೆಲ್ಲಾ ಗೇಲ್ ಪತ್ರಕರ್ತೆಯಲ್ಲಿ ಕೇಳಿದ್ದು, ಆತನ ಪ್ರಶ್ನೆಗಳೇ ಮುಜುಗರವುಂಟು ಮಾಡಿವೆ.
ಕಳೆದ 10 ವರ್ಷದಿಂದ ನತಾಶಾ ಬೆರಿಡ್ಜ್ ಎಂಬಾಕೆ ಗೇಲ್‌ನ ಪ್ರೇಯಸಿಯಾಗಿದ್ದು, ಈ ಸಂಬಂಧದಲ್ಲಿ ಹೆಣ್ಣು ಮಗುವೊಂದರ ಅಪ್ಪನಾಗಿದ್ದಾರೆ ಗೇಲ್. 
10 ಸಾವಿರ ಹೆಣ್ಮಕ್ಕಳು ನನಗಾಗಿ ಹಂಬಲಿಸುತ್ತಾರೆ, ನಾನು ಸುರಸುಂದರಾಂಗ. ನಾನಿಲ್ಲಿರುವ ಕಾರಣ ಸೆಕ್ಸ್ ಮಾಡಿಲ್ಲ ಎಂದು ಹೇಳಿದ ಗೇಲ್‌ಗೆ ನೀವು ಮಹಿಳೆಯರ ಬಳಿ ಹೋಗಿದ್ದೀರಾ? ಎಂದು ಕೇಳಿದ್ದಕ್ಕೆ, ಅಶ್ಲೀಲವಾಗಿ ಉತ್ತರಿಸಿದ್ದಾರೆ.
ಕ್ರಿಸ್ ಗೇಲ್ ಸಂದರ್ಶನದ ಬಗ್ಗೆ ವರದಿಯೊಂದರ ತುಣುಕು ಈ ಟ್ವೀಟ್ ನಲ್ಲಿದೆ.
ಈ ಹಿಂದೆ ಜನವರಿಯಲ್ಲಿ ಆಸ್ಟ್ರೇಲಿಯಾದ ಟಿವಿ ವರದಿಗಾರ್ತಿ ಮೆಲ್ ಮೆಕ್‌ಲಾಲಿನ್ ಜತೆ ಫ್ಲರ್ಟ್ ಮಾಡಿ ಗೇಲ್ ವಿವಾದಕ್ಕೀಡಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?