ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ವಿನೋದ್ ಕಾಂಬ್ಳಿ ಗರಂ
ಮುಂಬೈ: ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡಿದ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯನ್ನು ಮಾಜಿ ಆಟಗಾರ ವಿನೋದ್ ಕಾಂಬ್ಳಿ ಟೀಕಿಸಿದ್ದಾರೆ...
ಮುಂಬೈ: ಮುಂಬೈ: ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡಿದ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯನ್ನು ಮಾಜಿ ಆಟಗಾರ ವಿನೋದ್ ಕಾಂಬ್ಳಿ ಟೀಕಿಸಿದ್ದಾರೆ.
ಉಭಯ ದೇಶಗಳ ಪ್ರವಾಸಕ್ಕೆ ಆಯ್ಕೆ ಸಮಿತಿ ಈ ಭಾರಿ ರಣಜಿ ಗೆದ್ದ ಮುಂಬೈ ತಂಡದ ಯಾವೊಬ್ಬ ಆಟಗಾರನಿಗೂ ತಂಡದಲ್ಲಿ ಸ್ಥಾನ ನೀಡದಿರುವುದೇ ವಿನೋದ್ ಕಾಂಬ್ಳಿ ಕೋಪಕ್ಕೆ ಕಾರಣವಾಗಿದೆ.
ಮುಂಬೈ ತಂಡದ ಶ್ರೇಯಸ್ ಅಯ್ಯರ್, ಆದಿತ್ಯ ತರೆ ಮತ್ತು ಸಿದ್ದೇಶ್ ಲಾಡ್ ರಂತ ಆಟಗಾರರು ಉತ್ತಮವಾಗಿ ಆಡುತ್ತಿದ್ದು ಅವರಿಗೂ ಒಂದು ಅವಕಾಶ ನೀಡಬೇಕಿತ್ತು. ಇಂಥ ಯುವ ಆಟಗಾರರನ್ನೇ ಪ್ರವಾಸಕ್ಕೆ ಆಯ್ಕೆ ಮಾಡದೇ ಇರುವುದು ತಪ್ಪು. ಇಂಥ ತಪ್ಪುಗಳಿಗಾಗಿಯೇ ಈ ಹಿಂದೆ ಆಯ್ಕೆಗಾರರನ್ನು ಮೊಹಿಂದರ್ ಅಮರ್ ನಾಥ್ ಅವರು ಜೋಕರ್ಸ್ ಗಳು ಎಂದು ಕರೆದಿದ್ದರು ಎಂದು ಟ್ವೀಟಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.