ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ 
ಕ್ರಿಕೆಟ್

ಐಪಿಎಲ್ 9ರ ಚಾಂಪಿಯನ್ ಯಾರಾಗ್ತಾರೆ? ಆರ್ಸಿಬಿ ಅಥವಾ ಹೈದರಾಬಾದ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಫೈನಲ್ ಗೆ ಎರಡು ಪ್ರಬಲ ತಂಡಗಳು ಎಂಟ್ರಿ ನೀಡಿದ್ದು, ಭಾನುವಾರ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ...

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಫೈನಲ್ ಗೆ ಎರಡು ಪ್ರಬಲ ತಂಡಗಳು ಎಂಟ್ರಿ ನೀಡಿದ್ದು, ಭಾನುವಾರ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ ತಂದ ವಿರಾಟ್ ಕೊಹ್ಲಿ ಒಂದೆಡೆಯಾದರೆ. ಉತ್ತಮ ನಾಯಕತ್ವದ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ ಗೆ ತಲುಪಿಸಿದ ಕೀರ್ತಿ ಡೇವಿಡ್ ವಾರ್ನರ್ ಅವರಿಗೆ ಸಲ್ಲುತ್ತದೆ.

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಆರ್ಸಿಬಿಗೆ ಸದೃಢವಾಗಿದ್ದರೆ. ಹೈದರಾಬಾದ್ ಮಾರಕ ಬೌಲಿಂಗ್ ಪಡೆಯನ್ನು ಹೊಂದಿದೆ. ಆರ್ಸಿಬಿ ಪರ ಸ್ಫೋಟಕ ಬ್ಯಾಟ್ ಮನ್ ಕ್ರಿಸ್ ಗೇಯ್ಲ್ ವಿಭೃಂಬಿಸಬೇಕಿದೆ. ಇನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಆರ್ಸಿಬಿ ತಂಡದ ಟಾಪ್ ಬ್ಯಾಟ್ಸ್ ಮನ್ ಗಳು. ಅಂತೆ ನಾಳಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಅರವಿಂದ್, ಜೋರ್ಡಾನ್ ಹಾಗೂ ವಾಟ್ಸನ್ ಮಿಂಚಬೇಕಿದೆ.

ಹೈದರಾಬಾದ್ ತಂಡದಲ್ಲಿ ಭುವನೇಶ್ವರ್ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದು ಅವರಿಗೆ ಹೆನ್ರಿಕ್ಸ್ ಸಾಥ್ ನೀಡುತ್ತಿದ್ದಾರೆ. ಡೇವಿಡ್ ವಾರ್ನರ್ ಉತ್ತಮವಾಗಿ ಆಡುತ್ತಿದ್ದು ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!