ಇಂಗ್ಲೆಂಡ್ ಆಟಗಾರರು 
ಕ್ರಿಕೆಟ್

ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರಿಂದ ಕೀಳು ಅಭಿರುಚಿ ಪ್ರದರ್ಶನ

ಮೊಹಾಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಇಂಗ್ಲೆಂಡ್ ಆಟಗಾರರು ಅತ್ಯಂತ ಕೀಳು ಅಭಿರುಚಿಯನ್ನು ಪ್ರಕಟಿಸಿ ಎಲ್ಲೆಡೆ ಟೀಕೆಗೆ ಗುರಿಯಾಗಿದ್ದಾರೆ...

ಮೊಹಾಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಇಂಗ್ಲೆಂಡ್ ಆಟಗಾರರು ಅತ್ಯಂತ ಕೀಳು ಅಭಿರುಚಿಯನ್ನು ಪ್ರಕಟಿಸಿ ಎಲ್ಲೆಡೆ ಟೀಕೆಗೆ ಗುರಿಯಾಗಿದ್ದಾರೆ. 
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಪರ ಆಡುತ್ತಿದ್ದ ಮುರಳಿ ವಿಜಯ್ ಜೇಮ್ಸ್ ಆಂಡರ್ಸನ್ ಅವರ ಎಸೆತವನ್ನು ತಡೆದು ನಿಲ್ಲಿಸಿದರು. ಆಗ ಚೆಂಡನ್ನು ಕೈಗೆ ತೆಗೆದುಕೊಂಡ ಆ್ಯಂಡರ್ಸನ್ ಅವರು ಮುರಳಿಯೆಡೆಗೆ ಒಮ್ಮೆ ಎಸೆದಂತೆ ಮಾಡಿದರು. ನಂತರ ಎಸೆದೇ ಬಿಟ್ಟರು. ಅದು ಮುರಳಿ ಪ್ಯಾಡ್ ಗೆ ಬಡಿಯಿತು. ಈ ಹಂತದಲ್ಲಿ ಮುರಳಿ ಅಲ್ಲಾಡಿರಲಿಲ್ಲ. ಆದರೂ ಆ್ಯಂಡರ್ಸನ್ ಸೇರಿದಂತೆ ಇಂಗ್ಲೆಂಡ್ ಆಟಗಾರರು ಮುರಳಿ ಕ್ಷೇತ್ರರಕ್ಷಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿ ಆಂಪೈರ್ ಬಳಿ ಔಟ್ ಗಾಗಿ ಮನವಿ ಸಲ್ಲಿಸಿದರು. 
ಐಸಿಸಿ ನಿಯಮಗಳ ಪ್ರಕಾರ ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಕ್ಷೇತ್ರರಕ್ಷಣೆಗೆ ಅಡ್ಡಿ ಪಡಿಸಿದ್ದರೆ ಕ್ರೀಸ್ ಬಿಟ್ಟಿದ್ದಾಗ ಚೆಂಡನ್ನು ತಡೆದಿದ್ದರೆ ಇಂತಹ ಮನವಿ ಸಲ್ಲಿಸಬಹುದು. ಇದು ಯಾವುದು ನಡೆಯದೆಯೇ ಇಂಗ್ಲೆಂಡಿಗರು ಹೀಗೆ ಮನವಿ ಸಲ್ಲಿಸಿದ್ದು ಕೀಳು ಅಭಿರುಚಿ ಎಂದು ವರ್ಣಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ