ಕ್ರಿಕೆಟಿಗ ಯುವಿ ಹಾಗೂ ಅವರ ಅತ್ತಿಗೆ ಆಕಾಂಕ್ಷಾ (ಸಂಗ್ರಹ ಚಿತ್ರ) 
ಕ್ರಿಕೆಟ್

ಕ್ರಿಕೆಟಿಗ ಯುವರಾಜ್ ಸಿಂಗ್ ಡ್ರಗ್ಸ್ ಸೇವಿಸುತ್ತಾರಂತೆ!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ನಿಷೇಧಿತ ಮಾದಕವಸ್ತುಗಳನ್ನು ಸೇವಿಸುತ್ತಾರೆ ಎಂದು ಅವರ ಮಾಜಿ ಅತ್ತಿಗೆ ಆಕಾಂಕ್ಷಾ ಶರ್ಮಾ ಹೇಳಿದ್ದಾರೆ.

ಮುಂಬೈ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ನಿಷೇಧಿತ ಮಾದಕವಸ್ತುಗಳನ್ನು ಸೇವಿಸುತ್ತಾರೆ ಎಂದು ಅವರ ಮಾಜಿ ಅತ್ತಿಗೆ ಆಕಾಂಕ್ಷಾ ಶರ್ಮಾ ಹೇಳಿದ್ದಾರೆ.

ಬಿಗ್ ಬಾಸ್ ಹಿಂದಿ ಆವೃತ್ತಿಯ ಸ್ಪರ್ಧಿಯಾಗಿದ್ದ ಆಕಾಂಕ್ಷಾ ಅವರು ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ವೇಳೆ ಖಾಸಗಿ ವಾಹಿನಿಗೆ ಸಂದರ್ಶನ  ನೀಡಿರುವ ಅವರು ಹಲವು ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾರೆ. ಅಲ್ಲದೆ ಯುವಿ ಕುಟುಂಬದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಆಕಾಂಕ್ಷಾ ಯುವಿ ಓರ್ವ ಮಾದಕ  ವ್ಯಸನಿ ಎಂದೂ ಕೂಡ ಆರೋಪಿಸಿದ್ದಾರೆ.

ಯುವಿ ಮಾದಕ ವಸ್ತು ಮರಿಜುವಾನಾ ಸೇವಿಸುತ್ತಿದ್ದರು. ಈ ವಿಚಾರ ಅವರ ಮನೆಯವರಿಗೆಲ್ಲಾ ತಿಳಿದಿತ್ತು. ಇನ್ನೂ ಪ್ರಮುಖ ಅಂಶವೆಂದರೆ ಯುವಿ ತಾಯಿ ಶಬ್ನಮ್ ಸೇರಿದಂತೆ ಮನೆಯವರೆಲ್ಲಾ  ಮರಿಜುವಾನಾ ಸೇವಿಸುತ್ತಿದ್ದರು. ಈ ಬಗ್ಗೆ ಕೇಳಿದರೆ ಇಲ್ಲಿ ಇದು ಸಾಮಾನ್ಯ ಎಂದು ಹೇಳಿ ನನಗೂ ಅದನ್ನು ಸೇವಿಸಲು ನೀಡುತ್ತಿದ್ದರು ಎಂದು ಆಕಾಂಕ್ಷಾ ಗಂಭೀರ ಆರೋಪ ಮಾಡಿದ್ದಾರೆ.  ಆಕಾಂಕ್ಷಾ ಅವರ ಈ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದು, ಯುವಿ ಕುಟುಂಬ ಸೇರಿದಂತೆ ಅವರ ಅಭಿಮಾನಿ ಬಳಗ ಆಕಾಂಕ್ಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಕಾಂಕ್ಷಾ ವಿರುದ್ಧ ಯುವಿ ಕುಟುಂಬದಿಂದ ಮಾನನಷ್ಟ ಮೊಕದ್ದಮೆ
ಮಾಜಿ ಸೊಸೆ ಆಕಾಂಕ್ಷಾ ವಿರುದ್ಧ ತಿರುಗಿ ಬಿದ್ದಿರುವ ಯುವಿ ತಾಯಿ ಶಬ್ನಮ್ ಅವರು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಆಕಾಂಕ್ಷಾ  ಅವರೇ ಜೊರಾವರ್ ನನ್ನು ತೊರೆದಿದ್ದು, ಇದೀಗ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯುವರಾಜ್ ಸಿಂಗ್ ಅವರ ಹಿರಿಯ ಸಹೋದರ ಜೊರಾವರ್ ಅವರ ಪತ್ನಿಯಾಗಿರುವ ಆಕಾಂಕ್ಷಾ ಶರ್ಮಾ ಪತಿಯಿಂದ ಬೇರಾಗಿ ಜೀವಿಸುತ್ತಿದ್ದು, ಇತ್ತೀಚೆಗಷ್ಟೇ ಬಿಗ್ ಬಾಸ್ ಹಿಂದಿ ಆವೃತ್ತಿಗೆ  ಸ್ಪರ್ಧಿಯಾಗಿ ಹೋಗಿ ಎಲಿಮಿನೇಟ್ ಆಗಿದ್ದರು.

ಒಟ್ಟಾರೆ ಅತ್ತ ಯುವಿ ಟೀಂ ಇಂಡಿಯಾದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದ ಇತ್ತ ಅವರ ಅತ್ತಿಗೆ ಕುಟುಂಬದ ಮಾನವನ್ನು ಮಾಧ್ಯಮಗಳ ಮುಂದೆ ಹಾರಾಜು  ಹಾಕುತ್ತಿರುವುದು ಯುವಿ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?