ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಕ್ರಿಕೆಟಿಗರ ವೇತನ ಹೆಚ್ಚಳ: ಬಿಸಿಸಿಐ ವಿರುದ್ಧ ಟೀಂ ಇಂಡಿಯಾ ನಾಯಕ ಕೊಹ್ಲಿ ಗರಂ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗಷ್ಟೇ ಹೆಚ್ಚಳ ಮಾಡಿದ್ದ ಕ್ರಿಕೆಟಿಗರ ವೇತನಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 5 Apr 2017, 11:32 am

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗಷ್ಟೇ ಹೆಚ್ಚಳ ಮಾಡಿದ್ದ ಕ್ರಿಕೆಟಿಗರ ವೇತನಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಟಗಾರರ ಹೊಸ ವಾರ್ಷಿಕ ಗುತ್ತಿಗೆ ಒಪ್ಪಂದದ ಮೊತ್ತವನ್ನು ಬಿಸಿಸಿಐ ದುಪ್ಪಟ್ಟುಗೊಳಿಸಿರುವ ನಡುವೆಯೇ, ಬಿಸಿಸಿಐ ಘೋಷಣೆ ಮಾಡಿರುವ ಕ್ರಿಕೆಟಿಗರ ಸಂಭಾವನೆ ಕಡಿಮೆಯಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್  ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೊತ್ತವನ್ನು 3 ಕೋಟಿ ರು.ಗೆ ಏರಿಕೆ ಮಾಡಬೇಕು ಎಂದು ಕೊಹ್ಲಿ ಬೇಡಿಕೆ ಇಟ್ಟಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತೀಯರ  ವೇತನ ಕಡಿಮೆಯಾಗಿದ್ದು, ಎ, ಬಿ ಮತ್ತು ಸಿ ಶ್ರೇಣಿ ಗುತ್ತಿಗೆಗೆ ಕ್ರಮವಾಗಿ 5, 3 ಮತ್ತು 1.5 ಕೋಟಿ ರು. ನೀಡಬೇಕೆಂದು ಬೇಡಿಕೆ ಇಡಲಾಗಿದೆ.

ಕೊಹ್ಲಿ ಜತೆ ಈಗಾಗಲೆ ಟೀಮ್ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಕೂಡ ಬಿಸಿಸಿಐ ಮುಂದೆ ಇದೇ ರೀತಿಯ ಪ್ರಸ್ತಾಪ ಮಂಡಿಸಿದ್ದು, ಈ ಬೇಡಿಕೆಗೆ ಸಂಬಂಧಿಸಿದಂತೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಬುಧವಾರ ಸಭೆ  ನಡೆಸಲಿದೆ. ಸಭೆಯಲ್ಲಿ ವೇತನ ಏರಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಸಿಸಿಐ ಇತ್ತೀಚೆಗೆ ಎ, ಬಿ ಮತ್ತು ಸಿ ಶ್ರೇಣಿ ಆಟಗಾರರ ವೇತನವನ್ನು ಕ್ರಮವಾಗಿ 2, 1 ಕೋಟಿ ಮತ್ತು 50 ಲಕ್ಷ ರು.ಗೆ ದುಪ್ಪಟ್ಟುಗೊಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement