ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ತವರಿನ ಚೊಚ್ಚಲ ಪಂದ್ಯದಲ್ಲಿ ಚೊಚ್ಚಲ ಗೆಲುವಿನ ನಗೆ ಬೀರಿದ ಆರ್ ಸಿಬಿ!

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ 15 ರನ್ ಗಳ ರೋಚಕ ಗೆಲುವು ದಾಖಲಿಸಿದೆ.

ಕ್ರಿಕ್ ಇನ್ಫೋ ಚಿತ್ರ
Srinivasa Murthy VN
Updated On : 9 Apr 2017, 12:34 pm
ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ 15 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಬೆಂಗಳೂರು ತಂಡ ನೀಡಿದ್ದ 158 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆ ಮೂಲಕ 15 ರನ್ ಗಳ ಅಂತರದಲ್ಲಿ ಆರ್ ಸಿಬಿ ತಂಡ ದೆಹಲಿ ವಿರುದ್ಧ ಸರಣಿಯ ತನ್ನ  ಮೊದಲ ಗೆಲುವು ದಾಖಲಿಸಿತು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಪೇರಿಸಿತು. ಜಾಧವ್ (69 ರನ್)ಅವರ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ಬೆಂಗಳೂರು ತಂಡವನ್ನು ಕಡಿಮೆ ಮೊತ್ತಕ್ಕೆ  ಕುಸಿಯುವ ಅಪಾಯದಿಂದ ಪಾರು ಮಾಡಿತು. ಉಳಿದಂತೆ ವಾಟ್ಸನ್ ಗಳಿಸಿದ 24 ರನ್ ಗಳೇ ಆರ್ ಸಿಬಿ ಪರ ಇತರೆ ಬ್ಯಾಟ್ಸ್ ಮನ್ ಗಳು ಗಳಿಸಿದ ಗರಿಷ್ಠ ಮೊತ್ತವಾಗಿತ್ತು.
ದೆಹಲಿ ಪರ ಮಾರಿಸ್ 3 ವಿಕೆಟ್ ಪಡೆದರೆ, ಜಹೀರ್ ಖಾನ್ 2 ಮತ್ತು ಕುಮಿನ್ಸ್ ಮತ್ತು ನದೀಮ್ ತಲಾ 1 ವಿಕೆಟ್ ಪಡೆದರು.

Advertisement

Advertisement

ಆರ್ ಸಿಬಿ ನೀಡಿದ 158 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದೆಹಲಿ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್ ನಿಂದಾಗಿ ದೆಹಲಿ ತಂಡ ದಿಢೀರ್ ಕುಸಿಯಿತು. ಕೇವಲ 55 ರನ್ ಗಳಾಗುವಷ್ಟರಲ್ಲೇ ದೆಹಲಿ ತಂಡದ ಮೂರು ವಿಕೆಟ್ ಗಳು  ಪತನವಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ರಿಷಬ್ ಪಂತ್ (57 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನಷ್ಟೇ  ಪೇರಿಸಲು ಶಕ್ತವಾಯಿತು. ಆ ಮೂಲಕ 15 ರನ್ ಗಳ ಅಂತರದಲ್ಲಿ  ಸೋಲುಕಂಡಿತು.
ಇನ್ನು ಹೈದರಾಬಾದ್ ನಲ್ಲಿ ಸನ್ ರೈಸರ್ಸ್ ತಂಡದ ಎದುರು ಉದ್ಘಾಟನಾ ಪಂದ್ಯದಲ್ಲಿ ಮುಗ್ಗರಿಸಿದ್ದ ಆರ್ ಸಿಬಿ ತವರಿನ ಅಭಿಮಾನಿಗಳ ಎದುರು ಪುಟಿದೆದಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸ ನೀಡಿದೆ.
ಆರ್ ಸಿಬಿ ಪರ ಉತ್ತಮ ಬ್ಯಾಟಿಂಗ್ ಮಾಡಿ ಸವಾಲಿನ ಮೊತ್ತ ಪೇರಿಸಲು ನೆರವಾದ ಕೇದಾರ್ ಜಾದವ್ ಅರ್ಹವಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement