ಆಂಡ್ರೆ ರಸ್ಸೆಲ್‌ 
ಕ್ರಿಕೆಟ್

ಬಾಲಿವುಡ್ ಗೆ ಎಂಟ್ರಿ ನೀಡಲು ಮತ್ತೊಬ್ಬ ಕ್ರಿಕೆಟಿಗನ ತಯಾರಿ

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಆಲ್‌ರೌಂಡ್‌ ಆಟಗಾರ ಆಂಡ್ರೆ ರಸ್ಸೆಲ್‌ ಬಾಲಿವುಡ್‌ಗೆ ಎಂಟ್ರಿ ಕೊಡಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಮೂವಿ ಜೊತೆಗೆ ಮ್ಯೂಸಿಕ್‌ ಆಲ್ಬಂ ಬಿಡುಗಡೆ ..

ನವದೆಹಲಿ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಆಲ್‌ರೌಂಡ್‌ ಆಟಗಾರ ಆಂಡ್ರೆ ರಸ್ಸೆಲ್‌ ಬಾಲಿವುಡ್‌ಗೆ ಎಂಟ್ರಿ ಕೊಡಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಮೂವಿ ಜೊತೆಗೆ ಮ್ಯೂಸಿಕ್‌ ಆಲ್ಬಂ ಬಿಡುಗಡೆ ಮಾಡಲು ಕೆರಿಬಿಯನ್‌ ಆಟಗಾರ ರಸ್ಸೆಲ್‌ ರೆಡಿಯಾಗಿದ್ದಾರೆ.
ಸಿನಿಮಾದಲ್ಲಿ ವೃತ್ತಿ ಪ್ರಾರಂಭಿಸಲು ರೆಡಿಯಾಗಿದ್ದೇನೆ. ಅತೀ ಶೀಘ್ರದಲ್ಲಿಯೇ ನನ್ನ ಮೊದಲ ಅಂತಾರಾಷ್ಟ್ರೀಯ ಮ್ಯೂಸಿಕ್‌ ವಿಡಿಯೋ ಬಿಡುಗಡೆಯಾಗಲಿದೆ. ಜೊತೆಗೆ ನನ್ನ ಗಮನವನ್ನು ಮುಖ್ಯವಾಗಿ ಭಾರತದ ಮೇಲೆ ಹರಿಸಿದ್ದು, ಬಾಲಿವುಡ್‌ ಚಿತ್ರಗಳಲ್ಲಿ ನಟಿಸಲು ತಯಾರಿ ನಡೆಸಿದ್ದೇನೆ ಎಂದಿದ್ದಾರೆ. 
ರಸ್ಸೆಲ್‌ ಅವರ ಮ್ಯೂಸಿಕ್‌ ವಿಡಿಯೋವನ್ನು ಲಾಸ್‌ ಏಂಜಲೀಸ್‌ನ ಜೆಮಿನಿ ಮ್ಯೂಸಿಕ್‌ ನಿರ್ಮಿಸಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಸಿಂಗರ್‌ ಜಸ್ಟಿನ್‌ ಬೈಬರ್‌ ಅವರ ಇತ್ತೀಚಿನ ಆಲ್ಬಂ 'ಸಾರಿ' ಅನ್ನು ಇದೇ ಸಂಸ್ಥೆ ನಿರ್ಮಿಸಿತ್ತು. ರಸ್ಸೆಲ್‌ ಅವರು ಕೂಡಾ ತಮ್ಮ ಮ್ಯೂಸಿಕ್‌ ಆಲ್ಬಂ ಅನ್ನು ಇದೇ ವರ್ಷ ಬಿಡುಗಡೆ ಮಾಡಲಿದ್ದಾರೆ. 
ಈ ಹಿಂದೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ ಸಹ ಮ್ಯೂಸಿಕ್‌ ಆಲ್ಬಂಗಳನ್ನು ಮಾಡಿದ್ದರು. ಬ್ರಾವೋ 'ಚಾಂಪಿಯನ್‌', 'ಜಾಗರ್‌ಬಾಂಬ್‌' ಮತ್ತು 'ಟ್ರಿಪ್‌ ಅಭಿ ಬಾಕಿ ಹೈ' ಎಂಬ ಆಲ್ಬಂಗಳನ್ನು ಬ್ರಾವೋ ತಯಾರಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರ ಸಾವು, 8 ಮಂದಿಗೆ ಗಾಯ..!

ಮೈಸೂರು ದಸರಾ ಜಂಬೂಸವಾರಿ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ! ICUನಲ್ಲಿ ಸಾವು-ಬದುಕಿನ ಹೋರಾಟ!

ದಸರಾ ಜಾತ್ರೆಯಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ: ಚಲಿಸುವ ಕಾರಿನ ಮೇಲ್ಛಾವಣಿಗೆ ಕಟ್ಟಿ 1.5 ಕಿ.ಮೀ. ಎಳೆದೊಯ್ದು ಕಾರು ಹತ್ತಿಸಿದ ದುಷ್ಕರ್ಮಿಗಳು! Video

CS ಗೆ ತನಿಖೆ ಮಾಡಿ ವರದಿ ನೀಡಲು ಹೇಳಿದ್ದೇನೆ: ಮೈಸೂರಿನಲ್ಲಿ ಸಚಿವರನ್ನೇ ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರ ವರ್ತನೆಗೆ ಸಿಎಂ ಡಿಕೆಶಿ ಏನೆಂದರು?

ಡಿ-ಕಂಪನಿ ನಮ್ಮದಲ್ಲ, Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್, ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!