ಬೆಂಗಳೂರಿನಲ್ಲಿ ಏ.16 ರಂದು ನಡೆದ ರೈಸಿಂಗ್ ಪುಣೆ ಸೂಪರ್ಜೈಂಟ್ಸ್-ರಾಯಲ್ ಚಾಲೆಂಜರ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಆರ್ ಸಿಬಿಗೆ 162 ರನ್ ಗಳ ಗುರಿ ನೀಡಿದೆ.
63 ರನ್ ಗಳನ್ನು ಕಲೆಹಾಕಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ 7.4 ನೇ ಓವರ್ ನಲ್ಲಿ ಆರಂಭಿಕ ಆಟಗಾರರಾದ ಅಜಿಂಕ್ಯಾ ರೆಹಾನೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆರ್ ಸಿಬಿ ಬೌಲರ್ ಬದ್ರಿ ಮೊದಲ ವಿಕೆಟ್ ಪಡೆಯುವ ಮೂಲಕ ಅಜಿಂಕ್ಯಾ ರೆಹಾನೆ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
ನಂತರ ಬಂದ ರಾಹುಲ್ ತ್ರಿಪಾಠಿ ಹಾಗೂ ಸ್ಟೀವನ್ ಸ್ಮಿತ್ ಅವರ ಜೊತೆಯಾಟಕ್ಕೂ ಬಹುಬೇಗ ಆರ್ ಸಿಬಿ ಬ್ರೇಕ್ ಹಾಕಿತು. ಎಂಎಸ್ ಧೋನಿ-28 ಸ್ಟೀವನ್ ಸ್ಮಿತ್-27 ರನ್ ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರೆ ಬೆನ್ ಸ್ಟೋಕ್ಸ್, ಡೇನಿಯಲ್ ಕ್ರಿಶ್ಚಿಯನ್-1 ಮನೋಜ್ ತಿವಾರಿ-27, ಶಾರ್ದೂಲ್ ಠಾಕೂರ್-0, ಜಾವೇದ್ ಉನದ್ಕತ್-2 ರನ್ ಗಳ ನೆರವಿನಿಂದ ಆರ್ ಪಿಎಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳನ್ನು ಗಳಿಸಿ ಆರ್ ಸಿಬಿಗೆ 162 ರನ್ ಗಳ ಗುರಿ ನೀಡಿದೆ.