ಕ್ರಿಕೆಟ್

ಕ್ರಿಕೆಟ್ ಆಡುವಾಗ ಎಚ್ಚರ! ಗಜಿಯಾಬಾದ್‍ನಲ್ಲಿ ತಲೆಗೆ ಕ್ರಿಕೆಟ್ ಬಾಲ್ ಬಡಿದು ಬಾಲಕ ಸಾವು

Vishwanath S
ಗಜಿಯಾಬಾದ್: ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ಬಾಲ್ ಬಡಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಗಜಿಯಾಬಾದ್ ನಲ್ಲಿ ನಡೆದಿದೆ. 
ಗಜಿಯಾಬಾದ್ ನ ಹಿಂಡೊನ್ ಏರ್ ಬಸ್ ನಲ್ಲಿರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಆರ್ಯನ್ ಎಂಬಾತ ಬಾಲ್ ಬಡಿದು ಮೃತಪಟ್ಟಿರುವ ಬಾಲಕ. ಎಂದಿನಂತೆ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದು ಈ ವೇಳೆ ಆರ್ಯನ್ ಫೀಲ್ಡಿಂಗ್ ಮಾಡುತ್ತಿದ್ದಾಗ ಚೆಂಡು ಆತನ ತಲೆಗೆ ಬಡಿದಿದೆ. ಈ ವೇಳೆ ಸಹ ವಿದ್ಯಾರ್ಥಿಗಳು ಆತನನ್ನು ಮೇಲಕ್ಕೆ ಎತ್ತಿದರು. ಆದರೆ ಕ್ಷಣ ಮಾತ್ರದಲ್ಲೇ ಆರ್ಯನ್ ಕುಸಿದು ಬಿದ್ದಿರುವ ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಆರ್ಯನ್ ತಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ನ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಯನ್ ಗೆ ಚೆಂಡು ಬಡಿದ ಕೂಡಲೇ ಆತನನ್ನು ಏರ್ ಬಸ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಶಹಿದಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರ್ಯನ್ ಮೃತಪಟ್ಟಿದ್ದಾನೆ. 
SCROLL FOR NEXT