ಶಿಮ್ಲಾ: ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸುಷ್ಮಾ ವರ್ಮಾಗೆ ಹಿಮಾಚಲ ಪ್ರದೇಶ ಸರ್ಕಾರ ಡಿಎಸ್ ಪಿ ಹುದ್ದೆ ನೀಡಿ ಗೌರವಿಸಿದೆ.
ಇಂಗ್ಲೆಂಡ್ ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಆಗಿ ಮಿಂಚಿರುವ ಸುಷ್ಮಾ ವರ್ಮಾಗೆ ಹಿಮಾಚಲ ಪ್ರದೇಶ ಸರ್ಕಾರ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿದೆ. ಡಿಎಸ್ ಪಿ ಹುದ್ದೆ ಮಾತ್ರವಲ್ಲದೇ ಸುಷ್ಮಾ ಅವರಿಗೆ 5 ಲಕ್ಷ ಹಣವನ್ನು ಗೌರವ ಧನವನ್ನಾಗಿ ನೀಡಿ ಗೌರವಿಸಿದೆ.
ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್ ಅವರು, ಸುಷ್ಮಾ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಸುಷ್ಮಾ ಅವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರು. ಚೆಕ್ ನೀಡಿದರು. ಅಂತೆಯೇ ಸುಷ್ಮಾ ಅವರ ಸಾಧನೆಯನ್ನು ವೀರಭದ್ರ ಸಿಂಗ್ ಅವರು ಶ್ಲಾಘಿಸಿದರು.