ಗ್ಯಾರಿ ಕರ್ಸ್ಟನ್ 
ಕ್ರಿಕೆಟ್

2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಕೋಚ್ ಗ್ಯಾರಿ ಆರ್‌ಸಿಬಿಗೆ ಬ್ಯಾಟಿಂಗ್ ಕೋಚ್?

ಎಲ್ಲವೂ ಅಂದುಕೊಂಡಂತೆ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ ಮನ್ ಗ್ಯಾರಿ ಕರ್ಸ್ಟನ್...

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ ಮನ್ ಗ್ಯಾರಿ ಕರ್ಸ್ಟನ್ ಆಯ್ಕೆಯಾಗಲಿದ್ದಾರೆ. 
ಕಳೆದ 10 ಐಪಿಎಲ್ ಆವೃತ್ತಿಯಲ್ಲಿ ಒಂದು ಬಾರಿಯೂ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 2011ರ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಂ ಇಂಡಿಯಾದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡುವ ಇರಾದೆ ಇದೆ. ಈ ಸಂಬಂಧ ಗ್ಯಾರಿ ಅವರೊಂದಿಗೆ ತಂಡದ ಆಡಳಿತ ಮಂಡಳಿ ಮಾತುಕತೆಗಳನ್ನು ನಡೆಸುತ್ತಿವೆ. 
ಇನ್ನು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡೇನಿಯಲ್ ವೆಟರಿ ಪ್ರಧಾನ ಕೋಚ್ ಆಗಿ ಮುಂದುವರೆಯುವುದರಿಂದ ಗ್ಯಾರಿ ಕರ್ಸ್ಟನ್ ಬ್ಯಾಟಿಂಗ್ ಕೋಚ್ ಆಗುವ ಸಾಧ್ಯತೆ ಇದೆ. ಇನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಆಂಡ್ರ್ಯೂ ಮೆಕ್ ಡೊನಾಲ್ಡ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡುವ ಇರಾದೆ ಇದೆ. ಐಪಿಎಲ್ 11ನೇ ಆವೃತ್ತಿಯ ಮಹಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ 2018 ಜನವರಿ 27 ಹಾಗೂ 28ರಂದು ನಡೆಯಲಿದೆ.  
ಗ್ಯಾರಿ ಕರ್ಸ್ಟನ್ 2014 ಮತ್ತು 2015ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಕೋಚ್ ಆಗಿ ಕೆಲಸ ಮಾಡಿದ್ದರು. ಮೂರು ವರ್ಷಗಳ ಕಾಂಟ್ರಾಕ್ಟ್ ಇದ್ದರೂ ಬರೀ ಎರಡು ವರ್ಷಗಳು ಮಾತ್ರ ಗ್ಯಾರಿ ತಂಡದ ಕೋಚ್ ಆಗಿ ಕೆಲಸ ಮಾಡಿದ್ದರು. ಇನ್ನು ಒಂದು ವರ್ಷದ ಕಾಂಟ್ರಾಕ್ಟ್ ಬಾಕಿ ಇರುವಂತೆ ಅವರನ್ನು ಕೋಚ್ ಹುದ್ದೆಯಿಂದ ಫ್ರಾಂಚೈಸಿ ತೆಗೆದುಹಾಕಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!