ರಣಜಿ ಕ್ರಿಕೆಟ್: ಸೆಮಿ ಫೈನಲ್ ನಲ್ಲಿ ಕರ್ನಾಟಕಕ್ಕೆ 5 ರನ್ ಗಳ ವೀರೋಚಿತ ಸೋಲು 
ಕ್ರಿಕೆಟ್

ರಣಜಿ ಕ್ರಿಕೆಟ್: ಸೆಮಿ ಫೈನಲ್ ನಲ್ಲಿ ಕರ್ನಾಟಕಕ್ಕೆ 5 ರನ್ ಗಳ ವೀರೋಚಿತ ಸೋಲು

ರಣಜಿ ತ್ರೋಫಿ ಕ್ರಿಕೆಟ್ ಸರಣಿ ಪ್ರಾರಂಬದಿಂದ ಒಂದೂ ಸೋಲು ಕಾಣದೆ ಸೆಮಿ ಫೈನಲ್ಸ್ ತಲುಪಿದ್ದ ಕರ್ನಾಟಕ ತಂಡ ವಿದರ್ಭದ ಎದುರು 5 ರನ್ ವೀರೋಚಿತ ಸೋಲು ದಾಖಲಿಸಿದೆ.

ಕೋಲ್ಕತ್ತ: ರಣಜಿ ತ್ರೋಫಿ ಕ್ರಿಕೆಟ್ ಸರಣಿ ಪ್ರಾರಂಬದಿಂದ ಒಂದೂ ಸೋಲು ಕಾಣದೆ ಸೆಮಿ ಫೈನಲ್ಸ್ ತಲುಪಿದ್ದ ಕರ್ನಾಟಕ ತಂಡ ವಿದರ್ಭದ ಎದುರು  5 ರನ್ ವೀರೋಚಿತ ಸೋಲು ದಾಖಲಿಸಿದೆ. ಇದರೊಡನೆ ಕರ್ನಾಟಕದ ಫೈನಲ್ ಕನಸು ನುಚ್ಚು ನೂರಾಗಿದೆ.
ನಾಲ್ಕನೇ ದಿನದ ಅಂತ್ಯಕ್ಕೆ  111 ರನ್​ ಗಳಿಸಿ 7 ವಿಕೆಟ್​ ಕಳೆದುಕೊಂಡಿದ್ದ ಕರ್ನಾಟಕ ಕಡೆಯ ದಿನದಾಟದಲ್ಲಿ ಗೆಲ್ಲಲು ಅಗತ್ಯವಾಗಿದ್ದ 87 ರನ್ ಗಳಿಸುವಲ್ಲಿ ವಿಫಲವಾಯಿತು. ಈ ನಡುವೆ ಅಭಿಮನ್ಯು ಮಿಥುನ್​ (33) ಮತ್ತು ಶ್ರೇಯಸ್​ ಗೋಪಾಲ್​ (23*) ರನ್​ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವಿದರ್ಭ ಪರ ರಜನೀಶ್​ ಗುರ್ಬಾನಿ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕದ ಆಟಗಾರರು ಬೆದರುಗೊಂಬೆಗಳಾದರು.
ರಜನೀಶ್‌ ಗರ್ಬಾನಿ 68 ರನ್‌ಗಳನ್ನು ಖರ್ಚು ಮಾಡಿ 7 ವಿಕೆಟ್‌ ಸಂಪಾದಿಸುವ ಮೂಲಕ ವಿದರ್ಭ ತಂದದ ಗೆಲುವಿಗೆ ಕಾರಣಕರ್ತರಾದರು. ಇವರು ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು.ಹೀಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗರ್ಬಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಮುಂದಿನ ಫೈನಲ್ ಪಂದ್ಯ ಇಂದೋರ್ ನ ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆಯಲಿದ್ದು ವಿದರ್ಭ ತಂಡ ದೆಹಲಿಯೊಡನೆ ಸೆಣಸಲಿದೆ.
ಈ ಸೋಲಿನೊಡನೆ ಕರ್ನಾಟಕವು 3 ವರ್ಷಗಳ ಬಳಿಕ ರಣಜಿ ಟೂರ್ನಿ ಫೈನಲ್​ ತಲುಪುವ ಅವಕಾಶವನ್ನು ಕಳೆದುಕೊಂಡಿದೆ.
ಸ್ಕೋರ್‌ ವಿವರ
ವಿದರ್ಭ: 185, 313
ಕರ್ನಾಟಕ: 301, 192

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?