ಬೆಂಗಳೂರು: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗುತ್ತಿದ್ದು ಈ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಕೊಹ್ಲಿ ಈ ರೀತಿ ಉತ್ತಿರಿಸಿದ್ದಾರೆ.
ನಾನು ಹೆಚ್ಚು ರನ್ ಸಿಡಿಸಿದ್ದರೇ ನೀವು ಈ ಪ್ರಶ್ನೆ ಕೇಳುತ್ತಿರಲಿಲ್ಲ ಎಂದು ಪತ್ರಕರ್ತರಿಗೆ ಕೂಲಾಗಿ ಉತ್ತರಿಸಿದ್ದಾರೆ. ಐಪಿಎಲ್ ನಲ್ಲಿ ನಾನು ಆರಂಭಿಕನಾಗಿ ಆಡಿದ್ದು ಆ ಪಂದ್ಯದಲ್ಲಿ 400 ರನ್ ಗಳಿಸಿದ್ದೇವು. ಆಗ ಯಾರೂ ಏನು ಕೇಳಲಿಲ್ಲ. ಆದರೆ ಈಗ ನಾನು ರನ್ ಗಳಿಸಿದೇ ಇರುವುದು ನಿಮಗೆ ಸಮಸ್ಯೆಯಾಗಿ ಕಾಣುತ್ತಿದೆ ಎಂದು ಮರು ಪ್ರಶ್ನೆಯನ್ನು ಎಸೆದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ರನ್ ಗೆ ಔಟಾಗಿದ್ದರು. ಈ ಪಂದ್ಯದಲ್ಲಿ ಸುರೇಶ್ ರೈನಾ, ಎಂಎಸ್ ಧೋನಿ, ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ 202 ರನ್ ಗಳಿಸಿತ್ತು. ಜತೆಗೆ ಇಂಗ್ಲೆಂಡ್ ತಂಡವನ್ನು 127 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 75 ರನ್ ಗಳಿಂದ ಜಯಗಳಿಸಿತ್ತು.
ಟಿ20 ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಕಳೆದ ಎರಡು ಇನ್ನಿಂಗ್ಸ್ ನಲ್ಲಿ ರನ್ ಗಳಿಸದೇ ಇದ್ದರೆ ಇಂಥಾ ವಿಷಯಗಳ ಬಗ್ಗೆ ಅಚ್ಚರಿಯಿಂದ ಕೇಳುತ್ತೀರಿ. ನಾನೇ ಎಲ್ಲವನ್ನೂ ಮಾಡಿ ಮುಗಿಸಿದರೆ ಇನ್ನುಳಿದವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಆರಂಭಿಕನಾಗಿ ಕಣಕ್ಕಿಳಿದರು ನಾನು ಹೆಚ್ಚು ರನ್ ಗಳಿಸದೇ ಇರುವುದು ನನಗೂ ಬೇಸರವಾಗಿದೆ. ಆರಂಭಿಕನಾಗಿ ನಾನು ವಿಫಲನಾಗಿರುವುದಕ್ಕೆ ಬೇಸರವಿಲ್ಲ. ಯಾಕೆಂದರೇ 70ಕ್ಕೂ ಹೆಚ್ಚು ರನ್ ಗಳಿಂದ ತಂಡ ಜಯ ಗಳಿಸಿರುವ ಹೆಚ್ಚು ಖುಷಿ ತಂದಿದೆ ಎಂದರು.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು ಆ ಪೈಕಿ 52 ರನ್ ಮಾತ್ರ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics