ಅಲಿಸ್ಟರ್ ಕುಕ್ 
ಕ್ರಿಕೆಟ್

ಭಾರತ ವಿರುದ್ಧ ಸರಣಿ ಸೋಲು: ಟೆಸ್ಟ್ ನಾಯಕತ್ವಕ್ಕೆ ಕುಕ್ ರಾಜಿನಾಮೆ

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಅಲಿಸ್ಟರ್ ಕುಕ್ ವಿದಾಯ ಘೋಷಿಸಿದ್ದಾರೆ. ಕುಕ್ ರಾಜಿನಾಮೆ ಕುರಿತಂತೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಅಲಿಸ್ಟರ್ ಕುಕ್ ವಿದಾಯ ಘೋಷಿಸಿದ್ದಾರೆ. ಕುಕ್ ನಾಯಕತ್ವದಲ್ಲಿ ಇಂಗ್ಲೆಂಡ್ ಕಳೆದ ವರ್ಷ ಟೀಂ ಇಂಡಿಯಾ ವಿರುದ್ಧ 4-0ರಿಂದ ವೈಟ್ ವಾಷ್ ಆಗಿತ್ತು. ಬಳಿಕ ಕುಕ್ ನಾಯಕತ್ವದ ಕುರಿತು ಪ್ರಶ್ನೆಗಳೆದ್ದಿದ್ದವು. 
ಅಲಿಸ್ಟರ್ ಕುಕ್ ರಾಜಿನಾಮೆ ಕುರಿತಂತೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
59 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಅಲಿಸ್ಟರ್ ಕುಕ್ 2012ರ ಆಗಸ್ಟ್ ನಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. 2013 ಹಾಗೂ 2015ರಲ್ಲಿ ಆಷಸ್ ಸರಣಿ, ತವರಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ್ದ ಕುಕ್ ನಾಯಕ್ವದ ಮೈಲಿಗಲ್ಲಾಗಿವೆ. 
2010ರಿಂದ 2014ರ ತನಕ ಇಂಗ್ಲೆಂಡ್ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕುಕ್ 69 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 
ಅಲಿಸ್ಟರ್ ಕುಕ್ ರಾಜಿನಾಮೆಯಿಂದ ತೆರವುಗೊಂಡಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವವನ್ನು ಸ್ಫೋಟಕ ಬ್ಯಾಟ್ಸ್ ಮನ್ ಜೋ ರೂಟ್ ವಹಿಸಿಕೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT