ಸಂಗ್ರಹ ಚಿತ್ರ 
ಕ್ರಿಕೆಟ್

ಅಂಧರ ಟಿ20 ವಿಶ್ವಕಪ್ ನಲ್ಲೂ ಮುಂದುವರೆದ ಭಾರತದ ಪಾರಮ್ಯ; ಸೆಮೀಸ್ ಗೆ ಬಹುತೇಕ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡದ ಪಾರಮ್ಯ ಮುಂದುವರೆದಿದ್ದು, ಇದೀಗ ಅಂಧರ ಟಿ-20 ಪಂದ್ಯದಲ್ಲೂ ಭಾರತ ಜನ್ನ ಜಯಭೇರಿ ಮುಂದುವರೆಸಿದೆ.

ಕೊಚ್ಚಿನ್: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡದ ಪಾರಮ್ಯ ಮುಂದುವರೆದಿದ್ದು, ಇದೀಗ ಅಂಧರ ಟಿ-20 ಪಂದ್ಯದಲ್ಲೂ ಭಾರತ ಜನ್ನ ಜಯಭೇರಿ ಮುಂದುವರೆಸಿದೆ.

ನಿನ್ನೆ ಕೇರಳ ಕೊಚ್ಚಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಂಧರ ತಂಡವನ್ನು ಭಾರತ ಭರ್ಜರಿ 128 ರನ್ ಗಳ ಅಂತರದಿಂದ ಮಣಿಸಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆರಿಸಿಕೊಂಡ ಆಸ್ಚ್ರೇಲಿಯಾ ತಂಡ ನಿರೀಕ್ಷಿತ  ಫಲಕಾಣಲಿಲ್ಲ. ಭಾರತದ ಬ್ಯಾಟ್ಸಮನ್ ಸುನಿಲ್ ಸಿಡಿಸಿದ ಅಜೇಯ ಭರ್ಜರಿ ಶತಕ (163 ರನ್ , 72 ಎಸೆತ-ಗಾಯಗೊಂಡು ನಿವೃತ್ತಿ) ಹಾಗೂ ಮಹಮದ್ ಫರ್ಹಾನ್ (53 ರನ್,  35ಎಸೆತ ), ಇಕ್ಬಾಲ್ ಜಾಫರ್ ಅಜೇಯ (30 ರನ್, 13  ಎಸೆತ) ಅವರ ಬ್ಯಾಟಿಂಗ್ ನೆರವಿನಿಂದ ವಿಕೆಟ್ ನಷ್ಟವಿಲ್ಲದೇ ನಿಗದಿತ 20 ಓವರ್ ಗಳಲ್ಲಿ 272 ರನ್ ಗಳನ್ನು ಕಲೆಹಾಕಿತು.

ಈ ಭಾರಿ ಮೊತ್ತವನ್ನು ಬೆನ್ನು ಹತ್ತಿದ ಆಸಿಸ್ ಪಡೆ 18.4 ಓವರ್ ಗಳಲ್ಲಿ ಕೇವಲ 144 ರನ್ ಗಳಿಗೆ ಆಲ್ ಔಟ್ ಆಯಿತು. ಡೇನಿಯಲ್ ಜೇಮ್ಸ್ ಪ್ರಿಚರ್ಡ್ ಗಳಿಸಿದ 32 ರನ್ ಗಳೇ ಆ ತಂಡದ ಗರಿಷ್ಠ ಸ್ಕೋರ್ ಆಗಿತ್ತು. ಇನ್ನು ಭಾರತದ  ಪರ ಅಜಯ್ ಕುಮಾರ್ ರೆಡ್ಡಿ 2 ವಿಕೆಟ್ ಪಡೆದರೆ, ಇಕ್ಬಾಲ್ ಜಾಫರ್ ಮತ್ತು ಪ್ರೇಮ್ ಕುಮಾರ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ಭಾರತ 128 ರನ್ ಗಳ ಭರ್ಜರಿ ಜಯ ಸಾಧಿಸಿತು.

ಈ ಪಂದ್ಯದ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಿದ್ದು, ಅಂಕ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ. ಭಾರತ ಒಟ್ಟು 7 ಪಂದ್ಯಗಳನ್ನು ಆಡಿರುವ ಭಾರತ 6 ಗೆಲುವು ಹಾಗೂ 1 ಸೋಲಿನ ಮೂಲಕ ಒಟ್ಟು 18  ಅಂಕಗಳನ್ನು ಗಳಿಸಿದೆ. ಅಂತೆಯೇ ಭಾರತದ ನೆಟ್ ರನ್ ರೇಟ್ ಕೂಡ ಹೆಚ್ಚಿದ್ದು, +4.634ರಷ್ಟಿದೆ. 5 ಪಂದ್ಯಗಳಲ್ಲಿ ಐದನ್ನೂ ಗೆದ್ದಿರುವ ಪಾಕಿಸ್ತಾನ ತಂಡ 15 ಅಂಕಗಳನ್ನು ಗಳಿಸಿದ್ದು, 2ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT