ಚೆನ್ನೈ: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರ ಟ್ವೀಟ್ ಒಂದು ಇದೀಗ ಭಾರೀ ವಿವಾದವನ್ನೇ ಸೃಷ್ಠಿಸಿದೆ.
ಅಶ್ವಿನ್ ಟ್ವೀಟ್ ನಲ್ಲಿ: ಯುವಕರೇ ತಮಿಳುನಾಡಿನಲ್ಲೇ ಸದ್ಯದಲ್ಲೇ 234 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ, ಸಿದ್ಧವಾಗಿ ಎಂದು ಟ್ವೀಟ್ ಮಾಡಿದ್ದರು. ತಮಿಳುನಾಡಿಗೆ ನಿಯೋಜಿತ ಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಆಯ್ಕೆಯಾಗಿರುವ ಬೆನ್ನಲ್ಲೇ ಅಶ್ವಿನ್ ನಿಗೂಢ ಅರ್ಥದ ಟ್ವೀಟ್ ಮಾಡಿ ಚರ್ಚೆಗೆ ಕಾರಣರಾಗಿದ್ದಾರೆ.
ತಮಿಳುನಾಡಿನಲ್ಲಿ ಸದ್ಯ 235 ವಿಧಾಸಭಾ ಸ್ಥಾನಗಳಿವೆ. ಅಶ್ವಿನ್ 234 ಸ್ಥಾನ ಖಾಲಿಯಿದೆ ಎನ್ನುವ ಮೂಲಕ ಶೀಘ್ರದಲ್ಲೇ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳುತ್ತಿದ್ದಾರಾ? ಶಶಿಕಲಾ ಮುಖ್ಯಮಂತ್ರಿಯಾದರೇ ಸರ್ಕಾರ ಪತನವಾಗಲಿದೆಯಾ ಎಂಬರ್ಥದ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಇನ್ನೊಂದೆಡೆ ಶಶಿಕಲಾ ವಿರೋಧಿಗಳು ಹೊಗಳುವ ಮೂಲಕ ಟ್ವೀಟ್ ಶಶಿಕಲಾ ವಿರುದ್ಧವಾಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ .
ಅಶ್ವಿನ್ ತಮ್ಮ ಟ್ವೀಟ್ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ ಎನ್ನುವಷ್ಟರಲ್ಲಿ ತಾವು ರಾಜಕೀಯದ ಮೇಲೆ ಹೇಳಿಕೆ ನೀಡಿಲ್ಲ ಎಂದು ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.