ವೇಗವಾಗಿ 250 ವಿಕೆಟ್ ಪಡೆದು ವಿಶ್ವಶ್ರೇಷ್ಠ ಸಾಧನೆ ಮಾಡಿದ ಆರ್. ಅಶ್ವಿನ್
ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 250 ವಿಕೆಟ್ ಪಡೆದು ವಿಶ್ವಶ್ರೇಷ್ಠ ಸಾಧನೆ ಮಾಡಿದ್ದಾರೆ...
ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 250 ವಿಕೆಟ್ ಪಡೆದು ವಿಶ್ವಶ್ರೇಷ್ಠ ಸಾಧನೆ ಮಾಡಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಮುಶ್ಪಿಕರ್ ರಹೀಮ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಆರ್ ಅಶ್ವಿನ್ ತಮ್ಮ 45ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾದ ಮಾಜಿ ವೇಗಿ ಡೇನಿಸ್ ಲಿಲ್ಲೇ ಅವರ ವಿಶ್ವದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಡೇನಿಸ್ ಲಿಲ್ಲೇ 1981ರ ಫೆಬ್ರವರಿ 7ರಂದು 48 ಟೆಸ್ಟ್ ಪಂದ್ಯಗಳಲ್ಲಿ 250 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದರು.
ವೇಗವಾಗಿ ವಿಕೆಟ್ ಪಡೆದ ಅಶ್ವಿನ್ ಪಟ್ಟಿ
* 9ನೇ ಟೆಸ್ಟ್ ಪಂದ್ಯದಲ್ಲಿ 50 ವಿಕೆಟ್ ಪಡೆದ ಸಾಧನೆ
* 18ನೇ ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್ ಪಡೆದ ಸಾಧನೆ
* 29ನೇ ಟೆಸ್ಟ್ ಪಂದ್ಯದಲ್ಲಿ 150 ವಿಕೆಟ್ ಪಡೆದ ಸಾಧನೆ
* 37ನೇ ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಪಡೆದ ಸಾಧನೆ
* 45ನೇ ಟೆಸ್ಟ್ ಪಂದ್ಯದಲ್ಲಿ 250 ವಿಕೆಟ್ ಪಡೆದ ಸಾಧನೆ