ನವದೆಹಲಿ: ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ರಾಂಡ್ ಮೌಲ್ಯದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ರನ್ನು ಹಿಂದಿಕ್ಕಲಿದ್ದಾರೆ.
ಕಳೆದ ವರ್ಷ ಶಾರುಖ್ ಖಾನ್ ಬ್ರಾಂಡ್ ಮೌಲ್ಯ 800 ಕೋಟಿ ರುಪಾಯಿ ಇತ್ತು. ಇದೇ ವೇಳೆ ಕೊಹ್ಲಿ ಬ್ರಾಂಡ್ ಮೌಲ್ಯ 600 ಕೋಟಿ ರುಪಾಯಿ ಇತ್ತು. ಇದೀಗ ಕೊಹ್ಲಿಯ ಬ್ರಾಂಡ್ ಮೌಲ್ಯ ಶೇ.20 ರಿಂದ 25ರಷ್ಟು ಏರಿದೆ. ಆದ್ದರಿಂದ ಶಾರುಖ್ ರನ್ನು ಕೊಹ್ಲಿ ಮೀರುವುದರಲ್ಲಿ ಸಂಶಯವೇ ಇಲ್ಲ.
ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಭರ್ಜರಿ ಫಾರ್ಮ್ ನಲ್ಲಿರುವ ಕೊಹ್ಲಿ ಕಳೆದ ನಾಲ್ಕು ಟೆಸ್ಟ್ ಸರಣಿಯಲ್ಲಿ ದ್ವಿಶತಕ ಬಾರಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದ್ದು ಇದು ಕೂಡ ಕೊಹ್ಲಿ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ.