ಕೊಲಂಬೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ವನಿತೆಯರ ತಂಡ ಅಂತಾರಾಷ್ಟ್ರೀಯ ವನಿತೆಯರ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಕೊಲಂಬೊದ ಪಿ ಸರ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 67 ರನ್ ಗಳಿಗೆ ಸರ್ವಪತನ ಕಂಡಿತು. 68 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ತಂಡದ 23ನೇ ಓವರ್ ನಲ್ಲಿ ವಿಕೆಟ್ ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.
ಏಕ್ತ ಬಿಶತ್ ಅವರ ಮಾರಕ ಬೌಲಿಂಗ್ ದಾಳಿಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿತು. 10 ಓವರ್ ಮಾಡಿದ ಏಕ್ತ 5 ವಿಕೆಟ್ ಗಳನ್ನು ಪಡೆದರು. ಇನ್ನು ಶಿಕಾ ಪಾಂಡ್ಯೆ 2 ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ ನಲ್ಲಿ ದೀಪ್ತಿ ಶರ್ಮಾ(29*) ಹರ್ಮಾನ್ ಪ್ರೀತ್ ಗೌರ್ 24 ರನ್ ಗಳ ನೆರವಿನೊಂದಿಗೆ ತಂಡದ ಸುಲಭವಾಗಿ ಗುರಿ ಮುಟ್ಟಿತು.
2017ರ ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾ ಸದ್ಯ ಆಡಿದ್ದ ಐದು ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ನಲ್ಲಿ ಜೂನ್ ನಿಂದ ವನಿತೆಯರ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.