ಕೆ. ಗೌತಮ್ 
ಕ್ರಿಕೆಟ್

2 ಕೋಟಿಗೆ ಮುಂಬೈ ಪಾಲಾದ ಕರ್ನಾಟಕದ 'ಭಜ್ಜಿ' ಖ್ಯಾತಿಯ ಕೆ. ಗೌತಮ್

ಕರ್ನಾಟಕದ ಹರ್ಭಜನ್ ಸಿಂಗ್ ಎಂದು ಖ್ಯಾತಿ ಗಳಿಸಿರುವ ಕೆ. ಗೌತಮ್ ಐಪಿಎಲ್ 10ನೇ ಆವೃತ್ತಿಯ ಹರಾಜಿನಲ್ಲಿ 2 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್...

ಬೆಂಗಳೂರು: ಕರ್ನಾಟಕದ ಹರ್ಭಜನ್ ಸಿಂಗ್ ಎಂದು ಖ್ಯಾತಿ ಗಳಿಸಿರುವ ಕೆ. ಗೌತಮ್ ಐಪಿಎಲ್ 10ನೇ ಆವೃತ್ತಿಯ ಹರಾಜಿನಲ್ಲಿ 2 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. 
ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಆಡುವ ಸುವರ್ಣಾವಕಾಶ ಕರ್ನಾಟಕದ ರಣಜಿ ಆಟಗಾರ ಗೌತಮ್ ಗೆ ಸಿಕ್ಕಿದೆ. 10 ಲಕ್ಷ ಮುಖಬೆಲೆಯ ಗೌತಮ್ 2 ಕೋಟಿ ರುಪಾಯಿಗೆ ಮುಂಬೈ ಪಾಲಾಗಿದ್ದು, 10ನೇ ಆವೃತ್ತಿಗೆ ರಾಜ್ಯದಿಂದ ಅತೀ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಂಡ ಮೊದಲ ಆಟಗಾರ. 
ಐಪಿಎಲ್ ಗೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಗೌತಮ್ ಬಹಳ ವರ್ಷಗಳಿಂದ ಈ ಅವಕಾಶಕ್ಕಾಗಿ ಕಾಯುತ್ತಿದ್ದೆ. ಐಪಿಎಲ್ ನ ಯಾವುದಾದರೂ ತಂಡಕ್ಕೆ ಈ ಬಾರಿ ಆಯ್ಕೆಯಾಗುವ ವಿಶ್ವಾಸ ನನಗಿತ್ತು. ಇನ್ನು ಮುಂಬೈ ತಂಡದ ದಿಗ್ಗಜರೊಂದಿಗೆ ಕೆಲಸ ಮಾಡುವುದು ಹೆಮ್ಮೆಯ ವಿಷಯ. ತಂಡದೊಂದಿಗೆ ಕ್ರೀಡಾಂಗಣಕ್ಕೆ ಇಳಿಯಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. 
ಬಾಲ್ಯದಿಂದಲೂ ಹರ್ಭಜನ್ ಸಿಂಗ್ ಅಭಿಮಾನಿ ನಾನು. ಅವರು ಆಡಿರುವ ಎಲ್ಲ ಪಂದ್ಯಗಳನ್ನು ಕೂತೂಹಲದಿಂದ ನೋಡಿದ್ದೇನೆ. ಬೌಲಿಂಗ್ ಶೈಲಿಯನ್ನು ಗಮನಿಸಿದ್ದೇನೆ. ಒಂದಲ್ಲ ಒಂದು ದಿನ ಭಜ್ಜಿ ಜತೆ ಒಂದೇ ತಂಡದಲ್ಲಿ ಆಡಬೇಕು ಎನ್ನುವ ಕನಸು ಕಂಡಿದ್ದೆ ಇದೀಗ ಈ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel