ಕ್ರಿಕೆಟ್

ವಿಶ್ವಕಪ್ ಆರ್ಹತಾ ಫೈನಲ್: ಭಾರತ ವನಿತೆಯರು ಚಾಂಪಿಯನ್, ಆಫ್ರಿಕಾಗೆ ಬೆಂಬಿಡದ ಚೋಕರ್ಸ್ ಹಣೆಪಟ್ಟಿ

Vishwanath S

ಕೊಲಂಬೊ: ಐಸಿಸಿ ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾವನ್ನು ಒಂದು ವಿಕೆಟ್ ನಿಂದ ರೋಮಾಂಚನಕಾರಿಯಾಗಿ ಸೋಲಿಸಿ ಚಾಂಪಿಯನ್ ಎನಿಸಿಕೊಂಡಿದೆ.

ಕೊಲಂಬೋದ ಪಿ ಸಾರಾ  ಓವಲ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ 244 ರನ್ ಗಳನ್ನು ಗಳಿಸಿತು. 245 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ವನಿತೆಯರ ತಂಡ ಅಂತಿಮ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ 8 ರನ್ ಸಿಡಿಸಿ ವಿಜಯದ ನಗೆ ಬೀರಿತು.

40 ಓವರ್ ತನಕ ಪಂದ್ಯ ಭಾರತದ ಕೈಯಲ್ಲೇ ಇತ್ತು. ಅಂತಿಮ 10 ಓವರ್ ಗಳಲ್ಲಿ 7 ವಿಕೆಟ್ ನೆರವಿನಿಂದ 59 ರನ್ ಸಿಡಿಸಬೇಕಿತ್ತು. ಆದರೆ ದಕ್ಷಿಣ ಆಫ್ರಿಕಾ ಆಟಗಾರ್ತಿಯರ ನಿಖರ ಬೌಲಿಂಗ್ ದಾಳಿಯಿಂದಾಗಿ 5 ವಿಕೆಟ್ ಗಳು ಉದುರಿದವು. ಇದರೊಂದಿಗೆ ಕೊನೆಯ 2 ಓವರ್ ನಲ್ಲಿ 2 ವಿಕೆಟ್ ಗಳಿಂದ 12 ರನ್ ಸಿಡಿಸಬೇಕಿತ್ತು. ಅಂತಿಮ ಓವರ್ ನಲ್ಲಿ 2 ವಿಕೆಟ್ ನೆರವಿನಿಂದ 9 ರನ್ ಗಳಿಸಬೇಕಿತ್ತು. ಈ ವೇಳೆ ಭಾರತಕ್ಕೆ ನೆರವಾದವರೂ ಹರ್ಮನ್‌ಪ್ರೀತ್‌ ಕೌರ್ ಕೊನೆಯ ಎರಡು ಎಸೆತಗಳಲ್ಲಿ 8 ರನ್ ಬೇಕಿತ್ತು. ಆಗ ಕೌರ್ ಮೊದಲ ಎಸೆತವನ್ನು ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ರನ್ ಅವಶ್ಯಕತೆಯಿತ್ತು ಆಗ ಚೆಂಡನ್ನು ಆಪ್ ಸೈಡ್ ನಲ್ಲಿ ಹೊಡೆದು ಎರಡು ರನ್ ತೆಗೆದುಕೊಂಡರು ಇದರೊಂದಿಗೆ ಅಂತಿಮ ಎಸೆತದಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು.

SCROLL FOR NEXT