ಕ್ರಿಕೆಟ್

3ನೇ ಟೆಸ್ಟ್: 34ನೇ ಶತಕ ದಾಖಲಿಸಿದ ಯೂನಿಸ್ ಖಾನ್, ಪಾಕ್ ಗೆ ಆಸರೆ

Lingaraj Badiger
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಪಾಕಿಸ್ತಾನದ ಹಿರಿಯ ಬ್ಯಾಟ್ಸ್ ಮನ್ ಯೂನಿಸ್ ಖಾನ್ ಅವರು ಗುರುವಾರ 34ನೇ ಹಾಗೂ ಆಸೀಸ್ ನೆಲದಲ್ಲಿ ಮೊದಲ ಶತಕ ಸಿಡಿಸಿದ್ದಾರೆ. ಈ ಮೂಲಕ ಸುನಿಲ್ ಗವಾಸ್ಕರ್ ಅವರ ಟೆಸ್ಟ್ ದಾಖಲೆ ಸರಿಗಟ್ಟಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 39 ವರ್ಷದ ಬಲಗೈ ಬ್ಯಾಟ್ಸ್ ಮನ್ ಯೂನಿಸ್ ಖಾನ್ ಅವರು ಶತಕ ದಾಖಲಿಸುವ ಮೂಲಕ ಶತಕ 11 ದೇಶಗಳಲ್ಲಿ ಟೆಸ್ಟ್ ಶತಕ ದಾಖಲಿಸಿದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಹಿರಿಯ ಆಟಗಾರರ ಪೈಕಿ ಯೂನಿಸ್ (39) ಎರಡನೇಯವರಾಗಿದ್ದು. ಇದಕ್ಕೂ ಮುನ್ನ ಬ್ರಿಸ್ಬೇನ್ ನಲ್ಲಿ ಕ್ಲೈವ್ ಲಾಡ್ ಅವರು ತಮ್ಮ 40ನೇ ವಯಸ್ಸಿನಲ್ಲಿ ಶತಕ ಬಾರಿಸಿದ್ದರು.
34 ಶತಕ ಬಾರಿಸಿದವರ ಪಟ್ಟಿಯಲ್ಲಿ ಗವಾಸ್ಕರ್, ಮಹೇಲ ಜಯವರ್ದನೆ ಹಾಗೂ ಬ್ರಿಯಾನ್ ಲಾರಾ ಇದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಕೆ ಹತ್ತಿರವಿರುವ ಯೂನಿಸ್ ಅವರು 114 ಪಂದ್ಯಗಳಿಂದ 9,789ರನ್ ಗಳಿಸಿದ್ದಾರೆ.
ಯೂನಿಸ್‌ ಖಾನ್‌(136) ಅವರ ಜವಾಬ್ದಾರಿಯ ಆಟದಿಂದಾಗಿ ಪಾಕಿಸ್ಥಾನ ಮೂರನೇ ದಿನದಾಟದ ಅಂತ್ಯಕ್ಕೆ ಎಂಟು ವಿಕೆಟ್ ಕಳೆದುಕೊಂಡು 271ರನ್ ಸೇರಿಸಿದೆ.
SCROLL FOR NEXT