ಕೈಲ್ ಅಬೋಟ್ ಮತ್ತು ರಿಲ್ಲಿ ರೋಸ್ಸೋ 
ಕ್ರಿಕೆಟ್

ಆಫ್ರಿಕಾ ಆಟಗಾರರಾದ ಅಬೋಟ್, ರೋಸ್ಸೋ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯ

ದಕ್ಷಿಣ ಆಫ್ರಿಕಾ: ಇಂಗ್ಲೀಷ್ ಕೌಂಟಿ ಕ್ರಿಕೆಟ್ ಕ್ಲಬ್ ಹ್ಯಾಂಪ್ ಶೈರ್ ನಲ್ಲಿ ಆಡಲು ಹೆಚ್ಚು ಆಸಕ್ತಿ ವಹಿಸಿರುವ ಆಫ್ರಿಕಾದ ಕೈಲ್ ಅಬೋಟ್ ಮತ್ತು ರಿಲ್ಲಿ ರೋಸ್ಸೋ ಜತೆಗಿನ ಒಪ್ಪಂದವನ್ನು...

ದಕ್ಷಿಣ ಆಫ್ರಿಕಾ: ಇಂಗ್ಲೀಷ್ ಕೌಂಟಿ ಕ್ರಿಕೆಟ್ ಕ್ಲಬ್ ಹ್ಯಾಂಪ್ ಶೈರ್ ನಲ್ಲಿ ಆಡಲು ಹೆಚ್ಚು ಆಸಕ್ತಿ ವಹಿಸಿರುವ ಆಫ್ರಿಕಾದ ಕೈಲ್ ಅಬೋಟ್ ಮತ್ತು ರಿಲ್ಲಿ ರೋಸ್ಸೋ ಜತೆಗಿನ ಒಪ್ಪಂದವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ರದ್ದುಗೊಳಿಸಿದ್ದು, ಇದರೊಂದಿಗೆ ಅಬೋಟ್, ರೋಸ್ಸೋ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ.

ಅಬೋಟ್, ರೋಸ್ಸೋ ಈ ಇಬ್ಬರು ಆಟಗಾರರು ಹ್ಯಾಂಪ್ ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ನಲ್ಲೇ ಆಡಲು ಹೆಚ್ಚು ಆಸಕ್ತಿ ವಹಿಸಿದ್ದು, ಕೌಂಟಿ ಕ್ರಿಕೆಟ್ ನಲ್ಲಿ ಆಡುತ್ತಲೇ, ಆಫ್ರಿಕಾ ಪರ ಆಡುವ ಇಚ್ಛೆ ವ್ಯಕ್ತಪಡಿಸಿರುವುದು ಆಫ್ರಿಕಾ ಕ್ರಿಕೆಟ್ ಮಂಡಳಿ ಅಸಮ್ಮತಿಗೆ ಕಾರಣವಾಗಿದ್ದು ಈ ಇಬ್ಬರು ಜತೆಗಿನ ಒಪ್ಪಂದವನ್ನು ರದ್ದುಪಡಿಸಿದೆ.

ಆಫ್ರಿಕಾದ ವೇಗಿ ಅಬ್ಬೋಟ್ 11 ಟೆಸ್ಟ್ ಪಂದ್ಯದಲ್ಲಿ 39 ವಿಕೆಟ್, 28 ಏಕದಿನ ಪಂದ್ಯದಲ್ಲಿ 34 ವಿಕೆಟ್ ಮತ್ತು 21 ಟಿ20 ಪಂದ್ಯಗಳನ್ನು  ಆಡಿದ್ದಾರೆ. ಇನ್ನು ರೋಸ್ಸೋ ಬ್ಯಾಟ್ಸ್ ಮನ್ ಆಗಿದ್ದು 36 ಏಕದಿನ ಪಂದ್ಯ ಪೈಕಿ 1239 ರನ್ ಸಿಡಿಸಿದ್ದು 3 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದಾರೆ. 15 ಟಿ20 ಪಂದ್ಯದಲ್ಲಿ 327 ರನ್ ಸಿಡಿಸಿದ್ದು 2 ಅರ್ಧಶತಕ ಸಿಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ