ಆರ್ ಅಶ್ವಿನ್‍ಗೆ ಜಾಕ್ಪಾಟ್: 15 ಕಂಪನಿಗಳೊಂದಿಗೆ ಜಾಹೀರಾತು ಒಪ್ಪಂದ
ಟೆಸ್ಟ್ ಪಂದ್ಯಗಳಲ್ಲಿ ಉತ್ಯುತ್ತಮ ಪ್ರದರ್ಶನ ನೀಡಿ ಟೆಸ್ಟ್ ಬೌಲಿಂಗ್ ಮತ್ತು ಆಲ್ರೌಂಡರ್ ವಿಭಾಗದಲ್ಲಿ ವಿಶ್ವ ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾ ಕೇರಂ ಸ್ಪಿನ್...
ಚೆನ್ನೈ: ಟೆಸ್ಟ್ ಪಂದ್ಯಗಳಲ್ಲಿ ಉತ್ಯುತ್ತಮ ಪ್ರದರ್ಶನ ನೀಡಿ ಟೆಸ್ಟ್ ಬೌಲಿಂಗ್ ಮತ್ತು ಆಲ್ರೌಂಡರ್ ವಿಭಾಗದಲ್ಲಿ ವಿಶ್ವ ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾ ಕೇರಂ ಸ್ಪಿನ್ ಖ್ಯಾತಿಯ ಆರ್ ಅಶ್ವಿನ್ ಇದೀಗ 15 ಕಂಪನಿಗಳೊಂದಿಗೆ ಜಾಹಿರಾತು ಒಪ್ಪಂದ ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್ ಅಶ್ವಿನ್ ಸದ್ಯ ಭಾರತೀಯ ಬೌಲರ್ ಗಳಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿದ್ದು ಹೀಗಾಗಿ ಅವರ ಜತೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಕಂಪನಿಗಳು ಮುಗಿಬೀಳುತ್ತೀವೆ.
2016ರಲ್ಲಿ ನಡೆದ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಆಲ್ರೌಂಡ್ ಪ್ರದರ್ಶ ನೀಡುತ್ತಿದ್ದು ವಿಶ್ವದ ಬೌಲಿಂಗ್ ಮತ್ತು ಆಲ್ರೌಂಡರ್ ವಿಭಾಗದಲ್ಲಿ ವಿಶ್ವದ ಅಗ್ರಸ್ಥಾನದಲ್ಲಿದ್ದಾರೆ.