ನಾಯಕತ್ವಕ್ಕೆ ಎಂಎಸ್ ಧೋನಿ ನಿವೃತ್ತಿ; ಪಾಕ್ ಆಟಗಾರರ ಅಚ್ಚರಿ ಪ್ರತಿಕ್ರಿಯೆ
ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಸೀಮಿತ ಓವರ್ ತಂಡದ ನಾಯಕತ್ವ ಸ್ಥಾನಕ್ಕೆ ನಿವೃತ್ತಿ ಘೋಷಿಸಿರುವುದಕ್ಕೆ ಪಾಕಿಸ್ತಾನ ಆಟಗಾರರು...
ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಸೀಮಿತ ಓವರ್ ತಂಡದ ನಾಯಕತ್ವ ಸ್ಥಾನಕ್ಕೆ ನಿವೃತ್ತಿ ಘೋಷಿಸಿರುವುದಕ್ಕೆ ಪಾಕಿಸ್ತಾನ ಆಟಗಾರರು ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಕ್ತರ್ ತಮ್ಮ ಟ್ವೀಟರ್ ನಲ್ಲಿ ಧೋನಿಗೆ ನನ್ನ ಶುಭಾಶಯ, ನಾಯಕತ್ವದಿಂದ ಕೆಳಗಿಳಿದ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಂಎಸ್ ಧೋನಿ ಘನತೆ ಮತ್ತು ನಮ್ರತೆಯಿಂದ ತಮ್ಮ ನಾಯಕತ್ವ ಸ್ಥಾನದಿಂದ ಸರಿದಿದ್ದಾರೆ.
ಧೋನಿ ಓರ್ವ ಶ್ರೇಷ್ಠ ನಾಯಕ. ವಿಶ್ವದಲ್ಲಿರುವ ಎಲ್ಲ ಕ್ರಿಕೆಟಿಗರಿಗೂ ಸ್ಫೂರ್ತಿಯಾಗಿದ್ದಾರೆ. ಇಲ್ಲದೆ ಟೀಂ ಇಂಡಿಯಾ ತಂಡವನ್ನು ಅತ್ಯುತ್ತಮವಾಗಿ ರೂಪಿಸುವಲ್ಲಿ ಧೋನಿಯ ಕೊಡುಗೆ ಬಹಳ ದೊಡ್ಡದಿದೆ ಎಂದು ಪಾಕ್ ಸ್ಫೋಟಕ ಬ್ಯಾಟ್ಸ್ ಮನ್ ಶಾಹಿದ್ ಆಫ್ರಿದಿ ಟ್ವೀಟ್ ಮಾಡಿದ್ದಾರೆ.
ಮತ್ತೊರ್ವ ಪಾಕ್ ಕ್ರಿಕೆಟಿಗ ಜಹೀರ್ ಅಬ್ಬಾಸ್ ತಮ್ಮ ಟ್ವೀಟ್ ನಲ್ಲಿ ಕ್ರಿಕೆಟ್ ನ ಮೂರು ಮಾದರಿಗಳಲ್ಲೂ ಟೀಂ ಇಂಡಿಯಾ ತಂಡಕ್ಕೆ ಎಂಎಸ್ ಧೋನಿ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಜತೆಗೆ ಹಲವು ಟೂರ್ನಿಗಳನ್ನು ಗೆದ್ದು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.