ಇಂದೋರ್: ಮುಂಬೈ ಮತ್ತು ಗುಜರಾತ್ ನಡುವಿನ ರಣಜಿ ಫೈನಲ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿ ಬಾಲಕನೊಬ್ಬ ವೇಗಿ ಆರ್ ಪಿ ಸಿಂಗ್ ರನ್ನು ಸೆಲ್ಫಿಗೆ ಆಹ್ವಾನಿಸಿದಾಗ ಬಾಲಕನ ಮೊಬೈಲ್ ಕಿತ್ತೆಸೆದು ರುದ್ರ ಪ್ರತಾಪ್ ಸಿಂಗ್ ಅನುಚಿತವಾಗಿ ವರ್ತಿಸಿದ್ದಾರೆ.
ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಆರ್ ಪಿ ಸಿಂಗ್ ವಿಕೆಟ್ ಒಂದನ್ನು ಪಡೆದರು. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅವರು 300ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದು ಇದೇ ಖುಷಿಯಲ್ಲಿದ್ದ ಅಭಿಮಾನಿಯೊಬ್ಬ ಸೆಲ್ಫಿ ಫೋಟೋಗೆ ಆಹ್ವಾನಿಸಿದ ಆದರೆ ಆರ್ಪಿ ಸಿಂಗ್ ಆತನ ಮೊಬೈಲ್ ಕಿತ್ತು ಮೈದಾನದಲ್ಲಿ ಎಸೆದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದ್ದು ಸಿಂಗ್ ವಿರುದ್ಧ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರ್ವರ್ತನೆಯಿಂದ ಆರ್ ಪಿ ಸಿಂಗ್ ಇದೀಗ ಸುದ್ದಿಯಾಗಿದ್ದಾರೆ. ಇಂದೋರ್ ನಲ್ಲಿ ನಡೆಯುತ್ತಿದ್ದ ಪಂದ್ಯದ ಮೂರನೇ ದಿನ ಆರ್ ಪಿ ಸಿಂಗ್ ಪ್ರೇಕ್ಷಕರೊಬ್ಬರಿಗೆ ಮಧ್ಯದ ಬೆರಳನ್ನು ತೋರಿಸಿ ಅಪಹಾಸ್ಯ ಮಾಡಿದ್ದರು. ಇದೀಗ ಬಾಲಕನ ಮೌಬೈಲ್ ಕಿತ್ತೆಸೆದು ಅಹಂಕಾರ ಮೆರೆದಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಆಹ್ವಾನಿಸಿದ ಬಾಲಕ ಆರ್ ಪಿ ಸಿಂಗ್ ರನ್ನು ಕೆರಳಿಸುವಂತಾ ಮಾತನ್ನೇನಾದ್ರೂ ಆಡಿದ್ದಾರೆ ಅನ್ನೊದು ಸ್ಪಷ್ಟವಾಗಿಲ್ಲ.