ಸಚಿನ್ ದಾಖಲೆ ಮುರಿಯಬಹುದೆನೋ? ಅವರಂತೆ 24 ವರ್ಷ ಆಡಲು ಸಾಧ್ಯವಿಲ್ಲ: ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಚೇಸಿಂಗ್ ಶತಕದ ದಾಖಲೆಯನ್ನು ಮುರಿದಿದ್ದರು...
ನವದೆಹಲಿ: ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಚೇಸಿಂಗ್ ಶತಕದ ದಾಖಲೆಯನ್ನು ಮುರಿದಿದ್ದರು. ಈ ಬಗ್ಗೆ ಮಾತನಾಡಿರುವ ಕೊಹ್ಲಿ ನನ್ನ ಆಟವನ್ನು ನೋಡಿ ಸಚಿನ್ ದಾಖಲೆ ಮುರಿಯಬಹುದು ಅಂದುಕೊಳ್ಳುತ್ತಾರೆ ಆದರೆ ಸಚಿನ್ ಸಾಧಿಸಿರುವ ಮೈಲುಗಲ್ಲು ಮುಟ್ಟಲಾಗದು ಎಂದು ಹೇಳಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು 24 ವರ್ಷಗಳ ಕಾಲ ಟೀಂ ಇಂಡಿಯಾ ಪರವಾಗಿ ಆಡಿದ್ದಾರೆ. ಆದರೆ ನನ್ನ ಹತ್ತಿರ 24 ವರ್ಷಗಳ ಕಾಲ ದೀರ್ಘಾವಧಿ ಆಡಲು ಸಾಧ್ಯವಾಗದು. ಜತೆಗೆ ಸಚಿನ್ 200 ಟೆಸ್ಟ್, 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ ಇವು ಕಲ್ಪಿಸಿಕೊಳ್ಳಲಾಗದ ಅಂಕಿಅಂಶಗಳು. ಇದೊಂದು ಅದ್ಭುತ ಸಾಧನೆ ಎಂದು ಹೇಳಿದ್ದಾರೆ.
ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಇದು ಚೇಸಿಂಗ್ ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 17ನೇ ಶತಕವಾಗಿದೆ. ಈ ಮೂಲಕ ಚೇಸಿಂಗ್ ನಲ್ಲಿ ಸಚಿನ್ ಬಾರಿಸಿದ ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ 232ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರೆ ಕೊಹ್ಲಿ 122ನೇ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ್ದಾರೆ.