ನಾಗ್ಪುರ: ನಾಗ್ಪುರದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆರಿಸಿಕೊಂಡಿದ್ದು, ಭಾರತಕ್ಕೆ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಚಂಡದ ನಾಯಕ ಮಾರ್ಗನ್ ಅವರು ಬೌಲಿಂಗ್ ಆರಿಸಿಕೊಂಡಿದ್ದು, ಇಂಗ್ಲೆಂಡ್ ತಂಡದಲ್ಲಿ ಪ್ರಮುಖವಾಗಿ ಸ್ಪಿನ್ ಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ಹೀಗಾಗಿ ಲಿಯಾಮ್ ಡಾವ್ಸನ್ ಅವರಿಗೆ ಸ್ಥಾನ ನೀಡಲಾಗಿದೆ ಎಂದು ಹೇಳಿದರು. ಉಳಿದಂತೆ ಪ್ಲಂಕೆಟ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಇನ್ನು ಭಾರತ ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಸ್ಪಿನ್ ಆದ್ಯತೆ ನೀಡಿರುವ ನಾಯಕ ವಿರಾಟ್ ಕೊಹ್ಲಿ ಪರ್ವೇಜ್ ರಸೂಲ್ ಅವರನ್ನು ತಂಡದಿಂದ ಕೈಬಿಟ್ಟು ಅವರ ಬದಲಿಗೆ ಅಮಿತ್ ಮಿಶ್ರಾ ಅವರಿಗೆ ಸ್ಥಾನ ಕಲ್ಪಿಸಿದ್ದಾರೆ. ಇನ್ನು ಪದಾರ್ಪಣೆ ಪಂದ್ಯಕ್ಕಾಗಿ ಕಾಯುತ್ತಿರುವ ಉದಯೋನ್ಮುಖ ಆಟಗಾರ ರಿಷಬ್ ಪಂತ್ ಇಂದೂ ಕೂಡ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ಗೆ ಸಹಕರಿಸುವ ಪಿಚ್
ಕಾನ್ಪುರ ಪಿಚ್ ಫ್ಲ್ಯಾಟ್ ಪಿಚ್ ಆಗಿದ್ದು, ಇಲ್ಲಿ ಬೌಲರ್ ಗಳು ಮತ್ತು ಬ್ಯಾಟ್ಸಮನ್ ಗಳಿಗೆ ಸಮಾನ ಅವಕಾಶವಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಬೌಲರ್ ಗಳು ಅಥವಾ ಬ್ಯಾಟ್ಸಮನ್ ಗಳು ಮೈಲುಗೈ ಸಾಧಿಸಬಹುದು. ತಜ್ಞರ ಪ್ರಕಾರ ಮೊದಲು ಬ್ಯಾಟಿಂಗ್ ಮಾಡುವ ತಂಡ ಇಲ್ಲಿ ಹೆಚ್ಚು ರನ್ ಗಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.