ಕ್ರಿಕೆಟ್

ಶ್ರೀಲಂಕಾ ಪ್ರವಾಸ: ಟೆಸ್ಟ್‌ನಲ್ಲಿ ಮುರಳಿ ವಿಜಯ್‌ಗೆ ಕೊಕ್, ಶಿಖರ್ ಧವನ್‍ಗೆ ಸ್ಥಾನ

Vishwanath S
ನವದೆಹಲಿ: ಮುಂಬರುವ ಶ್ರೀಲಂಕಾ ಪ್ರವಾಸದ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಗಾಯಾಳು ಮುರಳಿ ವಿಜಯ್ ಬದಲಿಗೆ ಶಿಖರ್ ಧವನ್ ಸ್ಥಾನ ನೀಡಲಾಗಿದೆ.
ಜುಲೈ 26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು ಟೀಂ ಇಂಡಿಯಾ ತಂಡದ 16ರ ಬಳಗದಲ್ಲಿ ಮುರಳಿ ವಿಜಯ್ ಬದಲಿಗೆ ಶಿಖರ್ ಧವನ್ ರನ್ನು ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಅಮಿತಾಬ್ ಚೌಧರಿ ಹೇಳಿದ್ದಾರೆ. 
ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ನಾಲ್ಕು ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಮುರಳಿ ವಿಜಯ್ ಬಲಗಾಲಿನ ಮಂಡಿ ನೋವಿಗೆ ತುತ್ತಾಗಿದ್ದರು. ಸರಣಿ ಮುಗಿದು ನಾಲ್ಕು ತಿಂಗಳಾದರೂ ಗಾಯಗೊಂಡಿದ್ದ ಮುರಳಿ ವಿಜಯ್ ಫೀಟ್ ಆಗದೆ ಇರುವುದೇ ಟೆಸ್ಟ್ ತಂಡದಿಂದ ಅವರನ್ನು ಕೈಬಿಡಲು ಕಾರಣವಾಗಿದೆ. 
ಏಕದಿನ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿರುವ ಶಿಖರ್ ಧವನ್, ಒಟ್ಟಾರೆ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 38.52ರ ಸರಾಸರಿಯಲ್ಲಿ 1464 ರನ್ ಗಳನ್ನು ಮಾತ್ರ ಪೇರಿಸಿದ್ದರು. ಶಿಖರ್ ಧವನ್ 2016ರಲ್ಲಿ ಭಾರತ ಪ್ರವಾಸಕೈಗೊಂಡಿದ್ದ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. 
ಶ್ರೀಲಂಕಾ ಪ್ರವಾಸದಲ್ಲಿ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿ, 5 ಪಂದ್ಯಗಳ ಏಕದಿನ ಸರಣಿ ಮತ್ತು 1 ಟಿ20 ಪಂದ್ಯವನ್ನು ಆಡಲಿದೆ. 
ಟೆಸ್ಟ್ ತಂಡ
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ರೋಹಿತ್ ಶರ್ಮಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ವೃದ್ದಿಮಾನ್ ಸಹಾ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಅಭಿನವ್ ಮುಕುಂದ್
SCROLL FOR NEXT