ಟೀಂ ಇಂಡಿಯಾ ಆಟಗಾರರು 
ಕ್ರಿಕೆಟ್

ಗಾಲೆ ಟೆಸ್ಟ್ 2ನೇ ದಿನ, ಮೊದಲ ಇನ್ನಿಂಗ್ಸ್: ಭಾರತ 600 ರನ್; ಶ್ರೀಲಂಕಾ 154ಕ್ಕೆ 5 ವಿಕೆಟ್

ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ...

ಗಾಲೆ: ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. 
ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ ನಲ್ಲಿ 600 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾ 154 ರನ್ ಗಳಿಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 
ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಕರುಣರತ್ನೆ 2 ರನ್ ಗಳಿಸಿದ್ದಾಗ ಉಮೇಶ್ ಯಾದವ್ ಎಸೆತದಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು. ಇನ್ನು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ತರಂಗ 64 ರನ್ ಗಳಿಸಿದ್ದಾಗ ರನ್ ಔಟ್ ಆದರು. ಬಳಿಕ ಬಂದ ಗುಣತಿಲಕ 16 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೆಡಿಸ್ ಶೂನ್ಯಕ್ಕೆ ಔಟಾದರೇ, ಡಿಕ್ವೆಲ್ಲಾ 8 ರನ್ ಗೆ ನಿರ್ಗಮಿಸಿದರು. ಇನ್ನು ಮ್ಯಾಥ್ಯೂಸ್ ಅಜೇಯ 54 ಮತ್ತು ಪೆರೇರಾ 6 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಪರ ಮೊಹಮ್ಮದ್ ಶಮಿ 2 ವಿಕೆಟ್ ಮತ್ತು ಉಮೇಶ್ ಯಾದವ್, ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ. 
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿ 2ನೇ ದಿನದಾಟಕ್ಕೆ ಆಟ ಕಾಯ್ದುಕೊಂಡಿತ್ತು. ನಿನ್ನೆ 144 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪೂಜಾರಾ ಇಂದು ಕೇವಲ 7 ರನ್ ಗಳಿಸಿ ಎನ್ ಪ್ರದೀಪ್ ಗೆ ವಿಕೆಟ್ ಒಪ್ಪಿಸಿದರು. ಪೂಜಾರ ಬಳಿಕ ರಹಾನೆ ಕೂಡ ಅರ್ಧಶತಕ ಗಳಿಸಿ ಲಾಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ಆರ್ ಆಶ್ವಿನ್ 60 ಎಸೆತಗಳಲ್ಲಿ 47 ರನ್ ಗಳಿಸಿದರು. ವೃದ್ಧಿಮಾನ್ ಸಹಾ 17 ರನ್ ಗೆ ವಿಕೆಟ್  ಒಪ್ಪಿಸಿದರೆ, ಅರ್ಧಶತಕದ ಅಶ್ವಿನ್ ಕೂಡ ಅರ್ಧಶತಕ ಹೊಸ್ತಿಲಲ್ಲಿ ಯಡವಿ ಎನ್ ಪ್ರದೀಪ್ ಗೆ ವಿಕೆಟ್ ಒಪ್ಪಿಸಿದರು.
ಪದಾರ್ಪಣೆ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯಾ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಕೇವಲ 49 ಎಸೆತಗಳಲ್ಲಿ ಪಾಂಡ್ಯಾ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 50 ರನ್ ಪೂರೈಸಿದರು. ಬಳಿಕ ಲಾಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು. ಬಳಿಕ ಜಡೇಜಾ (15 ರನ್), ಶಮಿ (30 ರನ್) ಹಾಗೂ ಉಮೇಶ್ ಯಾದವ್ (11 ರನ್) ವೇಗವಾಗಿ ರನ್ ಗಳಿಸಲು ಹೋಗಿ ವಿಕೆಟ್ ಕೈ ಚೆಲ್ಲಿದರು. ಅಂತಿಮವಾಗಿ ಭಾರತ ತಂಡ 600 ರನ್ ಗಳಿಗೆ ಆಲ್ ಔಟ್ ಆಯಿತು.
ಶ್ರೀಲಂಕಾ ಪರ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎನ್ ಪ್ರದೀಪ್ 6 ವಿಕೆಟ್ ಕಬಳಿಸಿ ಯಶಸ್ವೀ ಬೌಲರ್ ಎನಿಸಿದರೆ, ಲಾಹಿರು  ಕುಮಾರ 3 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು. ಅಂತೆಯೇ ಅನುಭವಿ ರಂಗನಾ ಹೆರಾತ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi liquor policy: 'ನಿಮ್ಮ ಭ್ರಮೆಗಳಿಗಾಗಿ ಹಿಂದೆ ಸರಿಯಲ್ಲ, ನಾನೇ ವಿಚಾರಣೆ ಮಾಡುತ್ತೇನೆ': ಕೇಜ್ರಿವಾಲ್ ಗೆ ಭಾರಿ ಶಾಕ್

'ದುರುದ್ದೇಶಪೂರಿತ' ಪೋಸ್ಟ್‌: ರಾಹುಲ್ ಗಾಂಧಿ ದ್ವಿಪೌರತ್ವ ಪ್ರಕರಣದಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಾಧೀಶ!

Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ

IPL 2026: GT ವಿರುದ್ಧ ಸ್ಫೋಟಕ ಬ್ಯಾಟಿಂಗ್, ಇತಿಹಾಸ ನಿರ್ಮಿಸಿದ MI ನ ತಿಲಕ್ ವರ್ಮಾ!

IPL 2026: GT ವಿರುದ್ಧ MI ಭರ್ಜರಿ ಜಯ, ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ Shubman Gill ಪಡೆ!

SCROLL FOR NEXT