ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟರ್ ನಲ್ಲಿ ಪತಿ, ಪತ್ನಿ ಸಂಬಂಧದ ಬಗ್ಗೆ ತಿಳಿ ಹಾಸ್ಯ ಮಾಡಿದ್ದಾರೆ.
ಸೆಹ್ವಾಗ್ ಟ್ವೀಟರ್ ನಲ್ಲಿ, ಪತಿ ಕುಟುಂಬದ ತಲೆ ಇದ್ದ ಹಾಗೆ, ಪತ್ನಿ ಕುತ್ತಿಗೆ ಇದ್ದಂತೆ. ಕುತ್ತಿಗೆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತದೆ ಎಂದು ಟ್ವೀಟಿಸಿದ್ದಾರೆ. ವೀರೂ ಈ ಟ್ವೀಟ್ಗೆ ಭಾರೀ ಪ್ರತಿಕ್ರಿಯೆ ಬಂದಿದೆ. ಸೆಹ್ವಾಗ್ ಟ್ವೀಟ್ಗೆ ನಾಲ್ಕು ಗಂಟೆಗಳಲ್ಲಿಯೇ 1500 ರೀಟ್ವೀಟ್, 15 ಸಾವಿರ ಲೈಕ್ ಗಳು ಬಂದಿವೆ.
ಸೆಹ್ವಾಗ್ ಟ್ವೀಟರ್ ನಲ್ಲಿ ಸದಾ ಏನಾದರೊಂದು ವಿಷಯದ ಬಗ್ಗೆ ಸದಾ ಚರ್ಚಿಸುತ್ತಲೇ ಇರುತ್ತಾರೆ. ಅವರ ಅಭಿಮಾನಿಗಳಿಗಂತು ಆಗಾಗ್ಗೆ ರಸದೌತಣ ನೀಡುತ್ತಿರುತ್ತಾರೆ.