ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಸಿಡಿದೆದ್ದ ಯುವಿ "ಸ್ಫೋಟಕ" ದಾಖಲೆ!

ಮಿನಿ ವಿಶ್ವಕಪ್ ಮಹಾ ಸಮರ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ದಾಖಲೆಯೊಂದನ್ನು ಬರೆದಿದ್ದಾರೆ.

ಬರ್ಮಿಂಗ್ ಹ್ಯಾಮ್: ಮಿನಿ ವಿಶ್ವಕಪ್ ಮಹಾ ಸಮರ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ದಾಖಲೆಯೊಂದನ್ನು ಬರೆದಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಕ್ಷರಶಃ ಸ್ಫೋಟಕ ಆಟವಾಡಿದ ಯುವಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಅತೀ ಕಡಿಮೆ ಎಸೆತದಲ್ಲಿ  ಅರ್ಧಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೆ ಯುವಿ ಭಾಜನರಾಗಿದ್ದಾರೆ. ಅಂತೆಯೇ ಪಾಕಿಸ್ತಾನದ ವಿರುದ್ಧ ಭಾರತೀಯ ಆಟಗಾರ ಸಿಡಿಸಿದ ವೇಗದ ಅರ್ಧಶತಕ ಎಂಬ ದಾಖಲೆಗೂ ಯುವಿ ಅರ್ಧಶತಕ ಭಾಜನವಾಗಿದೆ.
ಇನ್ನು ಇಡೀ ಪಂದ್ಯಕ್ಕೆ ತಿರುವು ನೀಡಿದ್ದೇ ಯುವಿ ಬ್ಯಾಟಿಂಗ್ ಎನ್ನಬಹುದು. ಏಕೆಂದರೆ ಭಾರತ ತಂಡದ ರನ್ ಗತಿ ವೇಗ ಪಡೆದಿದ್ದೇ ಯುವಿ ಕ್ರೀಸ್ ಗೆ ಬಂದ ಮೇಲೆ. ಯುವಿ ಕ್ರೀಸ್ ಗೆ ಬರುವ ಮುನ್ನ ಅಂದರೆ 27 ರಿಂದ 37ನೇ ಓವರ್ ಗಳವರೆಗೂ ಭಾರತ ತಂಡದ ರನ್ ರೇಟ್ 4.64  ರಷ್ಟಿತ್ತು. ಆದರೆ ಯುವಿ ಕ್ರೀಸ್ ಗೆ ಬಂದ ಬಳಿಕ ಅಂದರೆ 37 ರಿಂದ 48ನೇ ಓವರ್ ನ ವರೆಗೂ ಭಾರತ ಬರೊಬ್ಬರಿ 11.00 ಸರಾಸರಿಯಲ್ಲಿ ರನ್ ಗಳಿಕೆ ಮಾಡಿದೆ.
3ನೇ ವಿಕೆಟ್ ಗೆ ಜೊತೆಗೂಡಿದ ಯುವಿ-ಕೊಹ್ಲಿ ಜೋಡಿ 9.4 ಓವರ್ ಗಳಲ್ಲಿ 9.62ರ ಸರಾಸರಿಯಲ್ಲಿ 93 ರನ್ ಗಳನ್ನು  ಕಲೆಹಾಕಿದೆ. ಅಲ್ಲದೆ ಅಂತಿಮ ಓವರ್ ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್ ಗೆ ಭಾರಿಸಿದ ಹಾರ್ದಿಕ್ ಪಾಂಡ್ಯಾ ಕೂಡ ಭಾರತದ ರನೇ ವೇಗ ಹೆಚ್ಚಿಸಿದರು. ಇದೇ ಪಾಕಿಸ್ತಾನದ ವಿರುದ್ಧ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್