ಕ್ರಿಕೆಟ್

ಕುಂಬ್ಳೆಯನ್ನೇ ಕೋಚ್ ಆಗಿ ಮುಂದುವರೆಸಲು ಸಲಹಾ ಸಮಿತಿ ಒಲವು

Vishwanath S
ಲಂಡನ್: ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾದ ಕೆಲವು ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು ಈ ನಡುವೆ ಕುಂಬ್ಳೆಯನ್ನೇ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ಸಲಹಾ ಸಮಿತಿ ಒಲವು ವ್ಯಕ್ತಪಡಿಸಿದೆ. 
ಸಲಹಾ ಸಮಿತಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರನ್ನು ನಿನ್ನೆ ಸಂದರ್ಶನ ಮಾಡಬೇಕಿತ್ತು. ಆದರೆ ಸಮಿತಿ ಸಂದರ್ಶನ ನಡೆಸಲಿಲ್ಲ ಎಂದು ತಿಳಿದುಬಂದಿದೆ. ಈ ಮೂಲಕ 2019ರ ಏಕದಿನ ವಿಶ್ವಕಪ್ ವರೆಗೂ ಕುಂಬ್ಳೆ ಅವರೇ ಕೋಚ್ ಆಗಿರಲಿ ಎಂಬ ಅಭಿಪ್ರಾಯ ಸಮಿತಿ ಹೊಂದಿದೆ. 
ಬಿಸಿಸಿಐ ಸಹ ಮೊದಲಿಗೆ ಕುಂಬ್ಳೆ ಅವರನ್ನು ಸಂದರ್ಶನ ನಡೆಸಲು ಸಮಿತಿಗೆ ಸೂಚಿಸಿತ್ತು. ಇನ್ನು ಕುಂಬ್ಳೆ ಪರ ಅಸಮಾಧಾನಗೊಂಡಿರುವ ಕೆಲ ಆಟಗಾರರ ಮನವೊಲಿಸಲು ಸಮಿತಿ ಪ್ರಯತ್ನಿಸಿದೆ. ಅಂತ ಬೇಸರಗೊಂಡಿರುವ ಆಟಗಾರರು ಕುಂಬ್ಳೆ ಅವರು ದರ್ಪದ ನಡೆಯನ್ನು ಬಿಟ್ಟರೆ ಅವರೇ ಕೋಚ್ ಆಗಿ ಮುಂದುವರೆಯುವುದಕ್ಕೆ ನಮ್ಮ ಅಭ್ಯಂತರವೇನು ಇಲ್ಲ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. 
ಇನ್ನು ಬಿಸಿಸಿಐ ಜೂನ್ 23ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಕೋಚ್ ಯಾರೆಂಬುದನ್ನು ಸ್ಪಷ್ಟಪಡಿಸಿಬೇಕಿದೆ. 
ಇನ್ನು ಕುಂಬ್ಳೆ ಕಟು ವರ್ತನೆಗೆ ಬಗ್ಗೆ ಕನಿಷ್ಠ ಪಕ್ಷ ಭಾರತ ಕ್ರಿಕೆಟ್ ತಂಡದ ಆಟಗಾರರು ವಿರೋಧಿಸಿದ್ದಾರೆ. ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಬೇಕೆಂದು ಒತ್ತಾಯಿಸಿದ್ದಾರೆಂದು ಸುದ್ದಿಯಾಗಿದೆ. ಇನ್ನು ಕುಂಬ್ಳೆಯ ಆಜ್ಞೆ ಮಾಡುವ ಸ್ವಭಾವ, ಗಾಯದ ಸಂದರ್ಭದಲ್ಲಿ ಅತ್ಯಂತ ಅಮಾನವೀಯವಾದ ನಿಯಮಗಳನ್ನು ಹೇರುವುದು ತಪ್ಪು ಎಂದು ಆಟಗಾರರು ಹೇಳಿದ್ದಾರೆ.
SCROLL FOR NEXT