ಎಂಎಸ್ ಧೋನಿ-ವಿರಾಟ್ ಕೊಹ್ಲಿ 
ಕ್ರಿಕೆಟ್

ಮೈದಾನದಲ್ಲೇ ಎಂಎಸ್ ಧೋನಿ ಮೇಲೆ ಸಿಟ್ಟಾದ ವಿರಾಟ್ ಕೊಹ್ಲಿ!

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೈದಾನದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ...

ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೈದಾನದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ವಿರಾಟ್ ಕೊಹ್ಲಿ ಮುಂಗೋಪಿ ಎನ್ನುವುದು ತಿಳಿದ ವಿಚಾರವೇ. ಕೆಲವೊಂದು ವೇಳೆ ಆಟಗಾರರ ಮೇಲೆ ಸಿಟ್ಟಿಗೆಳುವುದು ಸಾಮಾನ್ಯ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಕೂಲ್ ನಾಯಕ ಎಂದೇ ಖ್ಯಾತಿ ಗಳಿಸಿದ್ದ ಎಂಎಸ್ ಧೋನಿ ವಿರುದ್ದ ಸಿಟ್ಟಾಗಿದ್ದರು. ಆದರೆ ಕೊಹ್ಲಿ ಧೋನಿ ಮೇಲೆ ಸಿಟ್ಟಾಗಿದ್ದು ವೈಯಕ್ತಿಕ ವಿಚಾರಕಲ್ಲ. ಧೋನಿ ಅಪರೂಪಕ್ಕೆ ಮಾಡಿದ ಒಂದು ತಪ್ಪಿನಿಂದಾಗಿ ಕೊಹ್ಲಿ ಸಿಟ್ಟಾಗಲು ಕಾರಣವಾಯಿತು. 
ಕ್ರಿಕೆಟ್ ನಿಯಮಾವಳಿ ಪ್ರಕಾರ ಮೈದಾನದಲ್ಲಿ ವಿಕೆಟ್ ಕೀಪರ್ ಅವರ ಹೆಲ್ಮೆಟ್ ಅಥವಾ ಗ್ಲೌಸ್ ಬಿಚ್ಚಿಟ್ಟಿದ್ದಾಗ ಅಂತಹ ಸಂದರ್ಭದಲ್ಲಿ ಬಾಲ್ ಹೆಲ್ಮೆಟ್ ಅಥವಾ ಗ್ಲೌಸ್ ಗೆ ತಗುಲಿದರೆ. ವಿರುದ್ಧದ ತಂಡಕ್ಕೆ 5 ಬೌನಸ್ ರನ್ ಗಳನ್ನು ನೀಡಲಾಗುತ್ತದೆ. 
ಅಂತೆ ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಧೋನಿ ಫೀಲ್ಡರ್ ಎಸೆದ ಬಾಲ್ ಅನ್ನು ಹಿಡಿಯುವ ಸಲುವಾಗಿ ತಮ್ಮ ಬಲಗೈನ ಗ್ಲೌಸ್ ಅನ್ನು ಬಿಚ್ಚಿ ನೆಲದ ಮೇಲೆ ಎಸೆದಿದ್ದರು. ನಂತರ ಬಾಲ್ ಅನ್ನು ವಿಕೆಟ್ ಗೆ ಎಸೆಯುವಾಗ ಬಾಲ್ ಅವರ ಬಿಚ್ಚಿಟ್ಟಿದ್ದ ಗ್ಲೌಸ್ ಗೆ ತಗುಲಿದ್ದರಿಂದ ಎದುರಾಳಿ ತಂಡಕ್ಕೆ ಹೆಚ್ಚುವರಿ ಐದು ರನ್ ದೊರಕಿತು. ಇದರಿಂದ ಕೋಪಗೊಂಡ ಕೊಹ್ಲಿ ಮೈದಾನದಲ್ಲೇ ತಮ್ಮ ಅಸಮಾಧಾನವನ್ನು ಸೂಚಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT