ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಆಸಿಸ್ ಅಧಿಪತ್ಯ ಅಂತ್ಯ; 2011ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಸಾರ್ವಭೌಮತ್ವ!

ಐಸಿಸಿ ಟೂರ್ನಮೆಂಟ್ ಗಳಲ್ಲಿ ನೆಚ್ಚಿನ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆಸ್ಟ್ರೇಲಿಯಾ ಇದೀಗ ತನ್ನ ಖ್ಯಾತಿ ಕಳೆದುಕೊಂಡಿದ್ದು, ಆ ಸ್ಥಾನಕ್ಕೆ ಇದೀಗ ಭಾರತ ತಂಡವೇ ಅಧಿಪತಿಯಾಗಿದೆ.

ಲಂಡನ್: ಐಸಿಸಿ ಟೂರ್ನಮೆಂಟ್ ಗಳಲ್ಲಿ ನೆಚ್ಚಿನ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆಸ್ಟ್ರೇಲಿಯಾ ಇದೀಗ ತನ್ನ ಖ್ಯಾತಿ ಕಳೆದುಕೊಂಡಿದ್ದು, ಆ ಸ್ಥಾನಕ್ಕೆ ಇದೀಗ ಭಾರತ ತಂಡವೇ ಅಧಿಪತಿಯಾಗಿದೆ.

ಟಿ20 ವಿಶ್ವಕಪ್ ನಿಂದ ಆರಂಭವಾದ ಭಾರತ ತಂಡದ ಜೈತ್ರ ಯಾತ್ರೆ ಹಾಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಮುಂದುವರೆದಿದ್ದು, ಕಳೆದ ಬಾರಿ ಚಾಂಪಿಯನ್ ಆಗಿದ್ದ ಭಾರತ ತಂಡ ಇದೀಗ ಮತ್ತೆ  ಪ್ರಶಸ್ತಿಗೆ ಪಾಕಿಸ್ತಾನದೊಂದಿಗೆ ಕಾದಾಡಲು ಸಜ್ಜಾಗಿದೆ. ಈ ಬಾರಿಯೂ ಪ್ರಶಸ್ತಿ ಗೆಲುವ ನೆಚ್ಚಿನ ತಂಡ ಭಾರತವೇ ಎಂದು ಹೇಳಲಾಗುತ್ತಿದೆ.

ಇನ್ನು 2011ರ ಬಳಿಕ ನಡೆದ ಐಸಿಸಿ ಟೂರ್ನಮೆಂಟ್ ಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ. 2011ರ ಬಳಿಕ ನಡೆದ ಒಟ್ಟು 7 ಟೂರ್ನಮೆಂಟ್ ಗಳಲ್ಲಿ ಭಾರತ ಈ ವರೆಗೂ 4 ಬಾರಿ  ಫೈನಲ್ ಪ್ರವೇಶ ಮಾಡಿದ್ದು, 2 ಸೆಮಿಫೈನಲ್ ಗೇರಿತ್ತು. ಆ ಮೂಲಕ ಭಾರತ ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಶ್ರೀಲಂಕಾ ಒಟ್ಟು 3 ಬಾರಿ ಫೈನಲ್ ಪ್ರವೇಶ ಮಾಡಿ, 1 ಬಾರಿ ಸೆಮೀಸ್ ಹಂತಕ್ಕೇರಿತ್ತು. ಇನ್ನು 2 ಬಾರಿ  ಫೈನಲ್ ಹಾಗೂ 1 ಸೆಮೀಸ್ ಗೆ ಬಂದಿದ್ದ ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದ್ದು, 2 ಬಾರಿ ಫೈನಲ್ ಹಾಗೂ 1 ಸೆಮೀ ಫೈನಲ್ ಗೇರಿದ್ದ ವೆಸ್ಟ್ ಇಂಡೀಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2006ರ KSTP ಯೋಜನೆ ಪ್ರಕರಣ: CEC ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ಆದೇಶ

'ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ತೀವ್ರ ಹೆದರಿದ್ದರು: SP ಇಲ್ಲದಿದ್ದರೇ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ'

‘ಮಹಿಳೆಯ ದೇಹ ಮನರಂಜನೆಗೆ ಬಳಸುವ ಕಂಟೆಂಟ್ ಅಲ್ಲ’: ಜಾನ್ವಿ ಕಪೂರ್ ಬೆನ್ನಿಗೆ ನಿಂತ ನಟಿ ಖುಷ್ಬೂ ಸುಂದರ್

'ನನ್ನ ಲವರ್ ಜೊತೆನೇ ಹೋಗ್ತೀನಿ'; ಕೋರ್ಟ್ ನಲ್ಲಿ ಮಗಳ ಹೇಳಿಕೆಗೆ ಆಕ್ರೋಶ, ಯುವಕನ ತಂದೆಗೆ ಹಿಗ್ಗಾಮುಗ್ಗ ಜಾಡಿಸಿದ ತಾಯಿ!-Video

'ಅಸಭ್ಯವಾಗಿ ಮುಟ್ಟಿದ್ರು'; ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ ಆರೋಪ; 3 ಮಹಿಳಾ ಪತ್ರಕರ್ತರಿಂದ ದೂರು