ಸಂಗ್ರಹ ಚಿತ್ರ 
ಕ್ರಿಕೆಟ್

ಕೋಚ್ ಕುಂಬ್ಳೆ ರಾಜಿನಾಮೆ; ಕೊಹ್ಲಿ ವಿರುದ್ಧ ಟೀಕೆಗಳ ಸುರಿಮಳೆ!

ಭಾರತ ಕ್ರಿಕೆಟ್ ತಂಡ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಕುಂಬ್ಳೆ ರಾಜಿನಾಮೆ ಕೊಹ್ಲಿಯೇ ನೇರ ಕಾರಣ ಎಂಬ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಕುಂಬ್ಳೆ ರಾಜಿನಾಮೆ ಕೊಹ್ಲಿಯೇ  ನೇರ ಕಾರಣ ಎಂಬ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ.

ಭಾರತ ತಂಡದ ಕೋಚ್‌ ಸ್ಥಾನದಿಂದ ಕೆಳಗಿಳಿಯಲು ವಿರಾಟ್‌ ಕೊಹ್ಲಿಯೇ ಕಾರಣ ಎಂದು ಅನಿಲ್‌ ಕುಂಬ್ಳೆ ಸ್ಪಷ್ಟಪಡಿಸಿದ ಬಳಿಕ, ಕೊಹ್ಲಿ ವಿರುದ್ಧ ಟೀಕೆಗಳ ಸುರಿಮಳೆ ಶುರುವಾಗಿದ್ದು, ಕ್ರಿಕೆಟ್ ಮಾಜಿ ನಾಯಕರು, ಆಟಗಾರರು, ವಿವಿಧ  ಕ್ರೀಡೆಗಳ ದಿಗ್ಗಜರು, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಭಾರತೀಯ ನಾಯಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂಬ್ಳೆ ರಾಜೀನಾಮೆ ನೀಡಿದ ದಿನವನ್ನು ಭಾರತೀಯ ಕ್ರಿಕೆಟ್‌ಗೆ ಬೇಸರದ ದಿನ ಎಂದಿರುವ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ "ಆಟಗಾರರು ಮೃದುವಾಗಿ ಮಾತನಾಡುವ, ತಾವು ಹೇಳಿದಂತೆ ಕೇಳುವ ಕೋಚ್‌ ಬೇಕೆಂದು  ಅಪೇಕ್ಷಿಸಿದರೆ ಆ ಸ್ಥಾನಕ್ಕೆ ಅನಿಲ್‌ ಕುಂಬ್ಳೆ ಸೂಕ್ತರಲ್ಲ. ಆಟಗಾರನಾಗಿದ್ದಾಗಲೂ ಅಷ್ಟೇ, ಕೋಚ್‌ ಆದಾಗಲೂ ಅಷ್ಟೇ ಶಿಸ್ತಿಗೆ ಕುಂಬ್ಳೆ ನೀಡುವಷ್ಟು ಪ್ರಾಮುಖ್ಯತೆ ಬೇರಾರ‍ಯರೂ ನೀಡುವುದಿಲ್ಲ. ಹೀಗಾಗಿ ಅವರೊಂದಿಗೆ ಹೊಂದಾಣಿಕೆ  ಮಾಡಿಕೊಳ್ಳಲು ಕಷ್ಟವಾಗಿದ್ದರೆ ಅದು ಆಟಗಾರರ ತಪ್ಪು' ಎಂದು ಟೀಕಿಸಿದ್ದಾರೆ. ಅಂತೆಯೇ ಈ ವಿವಾದಕ್ಕೆ ಕಾರಣವಾದ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಗವಾಸ್ಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ವೀರೇಂದ್ರ ಸೆಹ್ವಾಗ್‌ ಸಹ ಮಾತನಾಡಿದ್ದು, ‘ಕುಂಬ್ಳೆಯಿಂದ ತೆರವಾಗಿರುವ ಸ್ಥಾನವನ್ನು ತುಂಬುವುದು ಕಷ್ಟ'ಎಂದು ಹೇಳಿದ್ದಾರೆ.

ಕೇವಲ ಮಾಜಿ ಆಟಗಾರರು ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಕೊಹ್ಲಿ ವಿರುದ್ಧ ಅಸಂಖ್ಯಾತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕುಂಬ್ಳೆ ಮುಂದುವರಿಯಬೇಕು ಎಂದು ಸಲಹಾ ಸಮಿತಿ ನಿರ್ಧರಿಸಿತ್ತು. ಆದರೆ  ಕೊಹ್ಲಿಯ ಹಠದಿಂದಾಗಿ ಕುಂಬ್ಳೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಎದುರಾಗಿದ್ದು ದುರಂತ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಭಾರತೀಯ ನಾಯಕ ಕೇವಲ ಕುಂಬ್ಳೆಗೆ ಮಾತ್ರವಲ್ಲ, ಸಲಹಾ ಸಮಿತಿಯಲ್ಲಿರುವ ಸಚಿನ್‌,  ಗಂಗೂಲಿ, ಲಕ್ಷ್ಮಣ್‌ಗೂ ಅವಮಾನಿಸಿದ್ದಾರೆ. ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಸ್ತೃತ ವರದಿ ಕೇಳಿದ ಆಡಳಿತ ಮಂಡಳಿ
ಇದೇ ವೇಳೆ ಕೊಹ್ಲಿ-ಕುಂಬ್ಳೆ ನಡುವಿನ ವಿವಾದಕ್ಕೆ ಕಾರಣಗಳೇನು ಎಂಬುದರ ಕುರಿತು ವಿಸ್ತೃತ ವರದಿ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿಗೆ ತಿಳಿಸಿದೆ.

ಇಂದು ಕೊಹ್ಲಿ ಸುದ್ದಿಗೋಷ್ಠಿ?
ಮತ್ತೊಂದೆಡೆ ಕುಂಬ್ಳೆ ರಾಜಿನಾಮೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ನಾಯಕ ವಿರಾಟ್ ಕೊಹ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವ  ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ವೇಳೆಗೆ ಕೊಹ್ಲಿ ಸುದ್ದಿಗೋಷ್ಟಿ ಕರೆಯುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್