ಸಂಗ್ರಹ ಚಿತ್ರ 
ಕ್ರಿಕೆಟ್

ರವಿ ಶಾಸ್ತ್ರಿ ಅಲ್ಲ, ಧೋನಿಯೇ ಪ್ಲೇಯರ್-ಕೋಚ್ ಆಗಿ ಕಾರ್ಯನಿರ್ವಹಿಸಲಿ: ವೈರಲ್ ಆಯ್ತು ಚರ್ಚೆ!

ಕುಂಬ್ಳೆ ರಾಜಿನಾಮೆ ಬಳಿಕ ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ತಂಡದ ಹಿರಿಯ ಆಟಗಾರರಾಗಿರುವ ಎಂಎಸ್ ಧೋನಿ ಅವರೇ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಲಿ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ನವದೆಹಲಿ: ಕುಂಬ್ಳೆ ರಾಜಿನಾಮೆ ಬಳಿಕ ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ತಂಡದ ಹಿರಿಯ ಆಟಗಾರರಾಗಿರುವ ಎಂಎಸ್ ಧೋನಿ ಅವರೇ ತಂಡದ ಕೋಚ್ ಆಗಿಯೂ ಕಾರ್ಯ  ನಿರ್ವಹಿಸಲಿ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ರಾಷ್ಟ್ರೀಯ ಮಾಧ್ಯಮ, ಕ್ರೀಡಾ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹುದೊಂದು ಹೊಸ ವಾದ ಹುಟ್ಟಿಕೊಂಡಿದ್ದು, ಟೀಮ್ ಇಂಡಿಯಾಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೇ ಪ್ಲೇಯರ್ ಕಮ್  ಕೋಚ್ ಆಗಿ ಕಾರ್ಯ ನಿರ್ವಹಿಸಲಿ ಎಂದು ಸಲಹೆ ನೀಡಲಾಗುತ್ತಿದೆ.  ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜಿನಾಮೆ ನೀಡಿದ ಬಳಿಕ ಬಿಸಿಸಿಐ ಎರಡೆರಡು ಬಾರಿ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದರೂ ಸೂಕ್ತ ಅಭ್ಯರ್ಥಿಗಳು ಮಾತ್ರ ಸಿಕ್ಕಿಲ್ಲ. ಇನ್ನು ಈ ಹಿಂದೆ ತಂಡದ ನಿರ್ದೇಶಕರಾಗಿ ಕಾರ್ಯ  ನಿರ್ವಹಿಸಿದ್ದ ರವಿಶಾಸ್ತ್ರಿ ಅವರನ್ನೇ ಕೋಚ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಸಹಮತ ಕೂಡ ಇದೆ. ಹೀಗಿದ್ದೂ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಕ ಮಾಡಬಾರದು  ಎಂದು ಕ್ರಿಕೆಟ್ ಪ್ರೇಮಿಗಳ ಒಂದು ದಂಡು ಆಗ್ರಹಿಸುತ್ತಿವೆ.

ಈಗಾಗಲೇ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ಏಕೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದ್ದು, "ಸ್ವಹಿತಾಸಕ್ತಿ ಹೊಂದಿರುವ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಸಾಕಷ್ಟು  ಬಾರಿ ತಂಡವನ್ನು ಬಿಟ್ಟು ತಮ್ಮ ವೈಯುಕ್ತಿಕ ಕೆಲಸಗಳಲ್ಲಿ ತೊಡಗಿದ್ದರು. ತಂಡದ ಕುರಿತು ಸಮರ್ಪಣಾ ಮನೋಭಾವ ಹೊಂದಿಲ್ಲದ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯ ನಿರ್ವಹಿಸುವುದು ಬೇಡ. ಅದರ ಬದಲಿಗೆ ತಂಡದ ಹಿರಿಯ  ಆಟಗಾರ ಎಂಎಸ್ ಧೋನಿ ಅವರೇ ಆಟಗಾರನಾಗಿದ್ದುಕೊಂಡು ಕೋಚ್ ಜವಾಬ್ದಾರಿ ಕೂಡ ಹೊರಲಿ ಎಂಬ ಚರ್ಚೆಗಳು ನಡೆಯುತ್ತಿವೆ.

ಆದರೆ ಮತ್ತೊಂದು ವರ್ಗ ಧೋನಿ ಅವರಿಗೆ ಕೋಚ್-ಆಟಗಾರ ಸ್ಥಾನ ನೀಡಲು ವಿರೋಧಿಸಿದ್ದು, ಕ್ರಿಕೆಟ್ ತಂಡದ ಕೋಚ್ ಎನ್ನುವುದು ಒತ್ತಡದ ಕೆಲಸ. ಆಟಗಾರನಾಗಿ ತಂಡವನ್ನು ನಿಭಾಯಿಸುವ ಕಲೆ ಒಂದು ರೀತಿಯಾಗಿದ್ದರೆ,  ಬಿಸಿಸಿಐ ಸಭೆಗಳು, ಟೀಮ್ ಮ್ಯಾನೇಜ್​ ವೆುಂಟ್​ ನಂಥ ಕೆಲಸಗಳನ್ನು ಕೋಚ್ ನಿಭಾಯಿಸುತ್ತಾರೆ. ಹಾಗಾಗಿ ಪ್ಲೇಯರ್-ಕೋಚ್ ಆಗಿ ಕ್ರಿಕೆಟ್ ತಂಡದಲ್ಲಿ ಅದರಲ್ಲೂ ರಾಷ್ಟ್ರೀಯ ತಂಡದಲ್ಲಿ ಆಡುವುದು ಕಷ್ಟವಾಗಲಿದೆ. ಧೋನಿ ಓರ್ವ  ಆಟಗಾರನಾಗಿ ಮಾತ್ರ ಮುಂದುವರೆಯಲಿ ಎಂದು ವಾದಿಸಿದ್ದಾರೆ.

ಧೋನಿಯೇ ಏಕೆ?
ಭಾರತ ತಂಡದ ನಾಯಕನಾಗಿ ದಶಕದ ಅನುಭವವಿರುವ ಧೋನಿ, ತಮ್ಮ ಯೋಚನೆ ಹಾಗೂ ಯೋಜನೆಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಅವರ ಶಾಂತಚಿತ್ತದ ವರ್ತನೆ ಮೈದಾನದಲ್ಲಿ ಭಾರತ ತಂಡಕ್ಕೆ ಹೆಚ್ಚಿನ ಯಶಸ್ಸು  ತಂದುಕೊಟ್ಟಿದೆ. ಅದರೊಂದಿಗೆ ಹಾಲಿ ನಾಯಕ ವಿರಾಟ್ ಕೊಹ್ಲಿಗೆ ಧೋನಿ ತುಂಬಾ ಆಪ್ತರಾಗಿದ್ದು, ಮೈದಾನದಲ್ಲಿಯೂ ಅಗತ್ಯ ಸಮಯದಲ್ಲಿ ಧೋನಿ ಬಳಿ ಹೋಗಿ ಸಲಹೆ ಕೇಳುವುದಕ್ಕೂ ಕೊಹ್ಲಿ ಹಿಂಜರಿಯುವುದಿಲ್ಲ. ಇಬ್ಬರ  ನಡುವೆ ಯಾವುದೇ ಅಹಂಗಳ ಸಂಘರ್ಷ ಇರದೇ ಇರುವುದು ಪ್ಲಸ್ ಪಾಯಿಂಟ್ ಆಗಿರಲಿದೆ.

ಈ ಹಿಂದೆ ಬಾಲಾಜಿ ಕೂಡ ಕೋಚ್-ಆಟಗಾರನ ಸ್ಥಾನ ನಿಭಾಯಿಸಿದ್ದರು!
ಟೀಮ್ ಇಂಡಿಯಾ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ 2015-16ರಲ್ಲಿ ತಮಿಳುನಾಡು ತಂಡದ ಆಟಗಾರರಾಗಿರುವುದರೊಂದಿಗೆ ಬೌಲಿಂಗ್ ಕೋಚ್ ಆಗಿಯೂ ಸೇವೆಸಲ್ಲಿದ್ದರು. ಇದಲ್ಲದೆ ಫುಟ್ ಬಾಲ್ ನಲ್ಲಿಯೂ ಇಂತಹ  ಉದಾಹರಣೆ ಇದ್ದು, 2014ರಲ್ಲಿ ರ್ಯಾನ್ ಗಿಗ್ಸ್, ಮ್ಯಾಂಚೆಸ್ಟರ್ ಫುಟ್​ ಬಾಲ್ ಕ್ಲಬ್​ನಲ್ಲಿ ಪ್ಲೇಯರ್-ಮ್ಯಾನೇಜರ್ ಆಗಿ ಆಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಕೊಲ್ಲಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಕಣಿವೆಗೆ ತಳ್ಳಿ ಕೊಲೆಗೈದ ಬಾಯ್​ಫ್ರೆಂಡ್​!