ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ 
ಕ್ರಿಕೆಟ್

ಐಸಿಸಿ ಮಹಿಳಾ ವಿಶ್ವಕಪ್: ರನೌಟ್ ಆದರೂ ಸೇಫ್ ಆದ ವಿಂಡೀಸ್ ಆಟಗಾರ್ತಿ, ಹೇಗೆ ಗೊತ್ತಾ?

ಮಹಿಳಾ ವಿಶ್ವಕಪನ್ನೂ ಅದ್ಧೂರಿಯಾಗಿ ಆಯೋಜಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ವೆಸ್ಟ್ ಇಂಡೀಸ್ ಹಾಗೂ...

ಟಾನ್ ಟನ್: ಮಹಿಳಾ ವಿಶ್ವಕಪನ್ನೂ ಅದ್ಧೂರಿಯಾಗಿ ಆಯೋಜಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ನಡೆದ ರನೌಟ್ ಪ್ರಸಂಗದಿಂದ ಮುಜುಗರಕ್ಕೆ ಒಳಗಾಗಿದೆ. 
ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಹೇಳಿಕೊಂಡಿರುವ ಐಸಿಸಿ ವಿಶ್ವಕಪ್ ನಂತಹ ಮಹತ್ವದ ಪಂದ್ಯಾವಳಿಯ ಕೇವಲ 10 ಪಂದ್ಯಗಳನ್ನು ಮಾತ್ರ ನೇರ ಪ್ರಸಾರ ಮಾಡಲು ನಿರ್ಧರಿಸಿದೆ. ಇದೇ ಕಾರಣಕ್ಕೆ ತಂತ್ರಜ್ಞಾನ ಬಳಕೆಯ ಅವಕಾಶವಿದ್ದರೂ ಅದರ ಉಪಯೋಗವನ್ನು ಕೆಲ ಪಂದ್ಯಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. 
ಸೋಮವಾರ ನಡೆದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಪಂದ್ಯಕ್ಕೆ ಟಿವಿ ಅಂಪೈರ್ ಇರಲಿಲ್ಲ. ಪಂದ್ಯದ 14ನೇ ಓವರ್ ನಲ್ಲಿ ವಿಂಡೀಸ್ ನ ಚೆಡೀನ್ ನೇಷನ್ ಎರಡು ರನ್ ಗಳಿಸುವ ಭರದಲ್ಲಿ ರನೌಟ್ ಆಗಿದ್ದರು. ಆದರೆ ಮೈದಾನದಲ್ಲಿದ್ದ ಅಂಪೈರ್ ಕ್ಯಾಥಿ ಕ್ರಾಸ್ ಔಟ್ ಇಲ್ಲ ಎಂದು ತೀರ್ಪು ನೀಡಿದರು. ಹೀಗಾಗಿ ಟಿವಿ ಅಂಪೈರ್ ಇಲ್ಲದ ಕಾರಣ ವಿಂಡೀಸ್ ಆಟಗಾರ್ತಿ ಸೇಫ್ ಆಗಿದ್ದರು. ಈ ಪಂದ್ಯ ವೆಬ್ ಸೈಟ್ ನಲ್ಲಿ ನೇರ ಪ್ರಸಾರವಾಗುತ್ತಿದ್ದ ಕಾರಣ, ರೀಪ್ಲೇಗಳು ಚೆಡೀನ್ ನೇಷನ್ ಔಟಾಗಿದ್ದನ್ನು ಖಚಿತಪಡಿಸಿದವು. ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ತಂಡ 204 ರನ್ ಗಳಿಗೆ ಆಲೌಟ್ ಆಯಿತು. 205 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 38.1 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು. 
ಮಹಿಳಾ ವಿಶ್ವಕಪ್ ಮೊದಲ ಬಾರಿಗೆ ಡಿಆರ್ಎಸ್ ಬಳಕೆ ಮಾಡಲಾಗಿದ್ದು ಭಾರತ ಡಿಆರ್ಎಸ್ ಉಪಯೋಗಿಸಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video