ಕ್ರಿಕೆಟ್

ಆಫ್ರಿಕಾ ಪ್ರವಾಸ: ಭಾರತ 'ಎ' ತಂಡಕ್ಕೆ ಕರುಣ್ ನಾಯರ್, ಮನಿಶ್ ಪಾಂಡೆ ಸಾರಥ್ಯ

Vishwanath S
ನವದೆಹಲಿ: ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡದ ನಾಯಕನಾಗಿ ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. 
ಆಫ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಏಕದಿನ ಪಂದ್ಯಕ್ಕೆ ಮನೀಷ್ ಪಾಂಡೆ ಅವರು ನೇತೃತ್ವ ವಹಿಸಿದರೆ, ಟೆಸ್ಟ್ ಗೆ ಕರುಣ್ ನಾಯರ್ ನಾಯಕತ್ವ ವಹಿಸಲಿದ್ದಾರೆ. ಇನ್ನು ಮನೀಷ್ ಪಾಂಡೆ ಗಾಯಗೊಂಡಿರುವುದರಿಂದ ಅವರು ಸಂಪೂರ್ಣ ಗುಣಮುಖರಾಗಿದ್ದರೆ ಮಾತ್ರ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಎ, ಆಫ್ರಿಕಾ ಎ ಮತ್ತು ಭಾರತ ಎ ತಂಡ ಸೆಣೆಸಲಿದೆ. ಜುಲೈ 26ರಂದು ಆಸ್ಟ್ರೇಲಿಯಾ ಎ ತಂಡದೊಂದಿಗೆ ಭಾರತ ಎ ತಂಡ ಸೆಣೆಸುವುದರೊಂದಿಗೆ ತ್ರಿಕೋನ ಸರಣಿ ಪ್ರಾರಂಭಗೊಳ್ಳಲಿದೆ. 
ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಕರುಣ್ ನಾಯರ್ ಮತ್ತು ಜಯಂತ್ ಯಾದವ್ ಇಬ್ಬರು ಸ್ಥಾನ ಪಡೆದಿದ್ದು ಒಂದು ಪಕ್ಷ ಮನೀಷ್ ಪಾಂಡೆ ಗುಣಮುಖರಾಗದಿದ್ದರೆ ಕರುಣ್ ನಾಯರ್ ಅವರೇ ಎರಡು ಮಾದರಿಗೂ ನಾಯಕತ್ವ ವಹಿಸಲಿದ್ದಾರೆ. 
ಏಕದಿನ ತಂಡದಲ್ಲಿ ಸ್ಥಾನ ಪಡೆದ ಆಟಗಾರರು
ಮನದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಮನೀಶ್ ಪಾಂಡೆ(ನಾಯಕ), ದೀಪಕ್ ಹೂಡಾ, ಕರುಣ್ ನಾಯರ್, ಕೃನಾಲ್ ಪಾಂಡ್ಯಾ, ರಿಶಭ್ ಪಂತ್(ವಿಕಿ) ವಿಜಯ್ ಶಂಕರ್, ಅಕ್ಷರ್ ಪಡೇಲ್, ಯಜುವೇಂದ್ರ ಚಲಾಲ್, ಜಯಂತ್ ಯಾದವ್, ಬಸೀಲ್ ತಂಪಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಸಿದಾರ್ಥ್ ಕೌಲ್. 
ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರು
ಪ್ರಿಯಾಂಕ ಪಂಚಲ್, ಅಭಿನವ್ ಮುಕುಂದ್, ಶ್ರೇಯಸ್ ಅಯ್ಯರ್, ಅಂಕಿತ್ ಬಾವ್ನೆ, ಕರುಣ್ ನಾಯರ್(ನಾಯಕ), ಸುದೀಪ್ ಚಟರ್ಜಿ, ಇಶಾನ್ ಕಿಶನ್, ಹನುಮಾ ವಿಹಾರಿ, ಜಯಂತ್ ಯಾದವ್, ಶಹಾಬಜ್ ನದೀಮ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಅಂಕಿತ್ ಚೌದರಿ, ಅಂಕಿತ್ ರಜಪೂತ್.
SCROLL FOR NEXT