ಚೆನ್ನೈ: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುಂದಿನ ಎರಡು ವರ್ಷದ ವರೆಗೆ ಟೀಂ ಇಂಡಿಯಾ 'ಎ' ಹಾಗೂ ಅಂಡರ್ 19 ತಂಡಕ್ಕೂ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ.
2015 ರಲ್ಲಿ ಟೀಂ ಇಂಡಿಯಾ 'ಎ' ಹಾಗೂ ಅಂಡರ್ 19 ತಂಡಕ್ಕೂ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರು. ಈಗ ಅವರನ್ನು ಮತ್ತೆ ಎರಡು ವರ್ಷ ಮುಂದುವರೆಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಪ್ರಸ್ತಾವನೆಗೆ ಬಿಸಿಸಿಐ ಒಪ್ಪಿಗೆ ಸೂಚಿಸಿದ್ದು, ದ್ರಾವಿಡ್ ಮುಂದುವರಿಕೆ ಅಧಿಕೃತವಾಗಿದೆ.
ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್ ತಂಡದ ಎ ವಿಭಾಗ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಜಯಗಳಿಸಿತ್ತು. ಅಷ್ಟೇ ಅಲ್ಲದೇ ಯು-19 ತಂಡ ಸಹ ದ್ರಾವಿಡ್ ಮಾರ್ಗದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಅವರ ಸೇವೆಯನ್ನು ಮತ್ತೆ ಎರಡು ವರ್ಷಗಳು ಪಡೆಯಲು ಬಯಸುತ್ತೇವೆ ಎಂದು ಬಿಸಿಸಿಐ ತಿಳಿಸಿದೆ.