ಮುಂಬೈ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶಾನ್ ಟೈಟ್ ಸಾಗರೋತ್ತರ ಭಾರತೀಯ ನಾಗರಿಕ ಪಾಸ್ ಪೋರ್ಟ್ ಪಡೆದಿದ್ದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಶಾನ್ ಟೈಟ್ 2010ರಲ್ಲಿ ಐಪಿಎಲ್ ಕೂಟದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಈ ವೇಳೆ ರೂಪದರ್ಶಿ, ವೈನ್ ಉದ್ಯಮಿ ಮಾಶೂಮ್ ಸಿಂಘಾ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ 2014ರಲ್ಲಿ ಮದುವೆ ಮೂಲಕ ಇವರಿಬ್ಬರು ಪತಿ ಪತ್ನಿಯರಾದರು. ಇದಾದ ಬಳಿಕ ಟೈಟ್ ಗೆ ಭಾರತದ ಜತೆಗಿನ ಒಡನಾಟ ಹೆಚ್ಚಾಯಿತು. ಭಾರತದ ಪೌರತ್ವ ಪಡೆಯುವ ಹಂಬಲವೂ ಹೆಚ್ಚಾಯಿತು.
ಶಾನ್ ಟೈಟ್ ಗೆ ನಾಗರಿಕ ಪಾಸ್ ಪೋರ್ಟ್ ಸಿಕ್ಕಿದ್ದರು. ಮೂಲಭೂತ ಹಕ್ಕಗಳಲ್ಲಿ ಒಂದಾಗಿರುವ ಮತದಾನದ ಹಕ್ಕು ಶಾನ್ ಟೈಟ್ ಗೆ ಇರುವುದಿಲ್ಲ. ಮುಂದಿನ 5 ವರ್ಷ ಬಳಿಕ ಅವರು ಒಂದು ವೇಳೆ ಪೂರ್ಣ ನಾಗರಿಕ ಹಕ್ಕು ಬಯಸಿ ಅರ್ಜಿ ಹಾಕಿದರಷ್ಟೇ ಸಂಪೂರ್ಣ ನಾಗರಿಕ ಹಕ್ಕು ಸಿಗಲಿದೆ.