ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಗಳನ್ನು ಕಳೆದುಕೊಂಡು 248 ರನ್ ಗಳಿಸಿದೆ.
ಆಸ್ಟ್ರೇಲಿಯಾದ ಬೌಲರ್ ಲೈಆನ್ ಭಾರತದ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರೆ ಭಾರತದ ಪರ ಚೇತೇಶ್ವರ ಪೂಜಾರಾ ಹಾಗೂ ಆರ್ ಅಶ್ವಿನ್ ಅರ್ಧಶತಕ ಸಿಡಿಸಿ ಬೆಂಬಲವಾಗಿ ನಿಂತರು. ಲೈಆನ್ ಬೌಲಿಂಗ್ ಭಾರತದ ಮಧ್ಯಮ ಕ್ರಮಾಂಕ ಕೊಂಚ ತಡವರಿಸಿತಾದರೂ ರಕ್ಷಣಾತ್ಮಕ ಆಟದ ಮೊರೆ ಹೋಗಿ ಹೆಚ್ಚಿನ ಅಪಾಯವನ್ನು ತಡೆಯಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಇನ್ನೂ 52 ರನ್ ಗಳ ಹಿನ್ನಡೆಯಲ್ಲಿದ್ದು, 10 ರನ್ ಗಳಿಸಿರುವ ವೃದ್ಧಿಮಾನ್ ಸಾಹಾ ಹಾಗೂ 16 ರನ್ ಗಳಿಸಿರುವ ರವೀಂದ್ರ ಜಡೇಜಾ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತದ ಆರಂಭಿಕ ಆಟಗಾರರಾದ ಲೋಕೇಶ್ ರಾಹುಲ್ 60, ಚೇತೇಶ್ವರ ಪೂಜಾರ 57 ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು. ಮುರಳಿ ವಿಜಯ್ 11ರನ್, ಅಜಿಂಕ್ಯಾ ರಹಾನೆ 46ರನ್, ಆರ್.ಅಶ್ವಿನ್ 30 ರನ್ ಗಳಿಸಿದರು. ಆದರೆ
ಕರ್ನಾಟಕದ ಕರುಣ್ ನಾಯರ್ 5 ರನ್ ಗಳಿಸಿ ಲೈಆನ್ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಮತ್ತೊಮ್ಮೆ ವಿಫಲರಾದರು.